ದೇವಾಂಗಪೇಟೆ, ನಗರದ ಮೊದಲ ದೃಷ್ಠಿ ದೋಷ ರಹಿತ ವಾರ್ಡ್

14 Feb 2019 2:13 PM |
303 Report

ನಮ್ಮ ಕಣ್ಣು ನಮ್ಮ ದೊಡ್ಡಬಳ್ಳಾಪುರ ಯೋಜನೆಯ ಅಡಿಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ದೇವಾಂಗ ಪೇಟೆ [ಹೇಮಾವತಿ ಪೇಟೆ] ವಾರ್ಡ್ ನಗರದ ಮೊದಲ ದೃಷ್ಠಿ ದೋಷ ರಹಿತ ವಾರ್ಡ್ ಎಂದು ಘೋಷಿಸುವ ನಾಮ ಫಲಕ ಅನಾವರಣವನ್ನು ಇಂದು ದೇವಾಂಗ ಪೇಟೆಯ ವಾಟರ್ ಟ್ಯಾಂಕ್ ಹತ್ತಿರ ಮಾಡಲಾಯಿತು. ನಾಮ ಫಲಕ ಅನಾವರಣವನ್ನು ಎಸ್ಸಿಲಾರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಅನಾವರಣ ಮಾಡಿದರು.

ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಎಸ್.ಎಂ.ಭಾಸ್ಕರ್, ಏಷಿಯಾ ಪೆಸಿಫಿಕ್ ಸಂಸ್ಥೆಯ ಉಪಾಧ್ಯಕ್ಷೆ ಸುಗತ ಬ್ಯಾನರ್ಜಿ, ಎಸ್ಸಿಲಾರ್ ಕಂಪನಿಯ ಕಂಟ್ರಿ ಹೆಡ್ ಮಿಲಿಂದ್ ಜಾದವ್, ಅಡ್ವೈಸರ್ ರಾಮಚಂದ್ರನ್, ಲೀಗಲ್ ಹೆಡ್ ಪ್ರಿಯಾ, ವಿಷನ್ ಫೌಂಡೇಷನ್ ಹೆಡ್ ಮಹೇಶ್, ದೃಷ್ಠಿ ಆಸ್ಪತ್ರೆಯ ಸಿ.ಇ.ಓ.ಕಿರಣ್, ಇನ್ ಛಾರ್ಜರ್ ಬಾಲು, ಸಂಯೋಜಕ ಸತೀಶ್ ಮತ್ತಿತರರು ಹಾಜರಿದ್ದರು.  

ಎಸ್ಸಿಲಾರ್ ನೇತ್ರ ಸಹಾಯಕರಾದ ನವ್ಯ, ಶೋಭ, ಗೀತ, ರಮ್ಯಾ, ಭರತ್ ಮತ್ತು ರಾಜಶೇಕರ್  ಒಟ್ಟು ಹದಿನಾಲ್ಕು ದಿನಗಳಕಾಲ ವಾರ್ಡ್ ಸುತ್ತಿ 1013 ಮನೆ ಮತ್ತು ಅಂಗಡಿಗಳಲ್ಲಿ ತಪಾಸಣೆ ನೆಡೆಸಿ 1810 ಮಂದಿ ನಾಗರೀಕರ ಕಣ್ಣುಗಳನ್ನು ಪರೀಕ್ಷಿಸಿ, 810 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಿದ್ದಾರೆ.

ದೃಷ್ಠಿ ಆಸ್ಪತ್ರೆಯ ಬಾಲು ಮಾತನಾಡಿ ನಮ್ಮ ಕಣ್ಣು ನಮ್ಮ ದೊಡ್ಡಬಳ್ಳಾಪುರ ಯೋಜನೆಯ ಅಡಿಯಲ್ಲಿ ದೊಡ್ಡಬಳ್ಳಾಪುರದಲ್ಲಿ ನಾವು ಮೊದಲಿಗೆ ಆಯ್ಕೆ ಮಾಡಿಕೊಂಡಿದ್ದು ಹೇಮಾವತಿ ಪೇಟೆಯನ್ನು ಇಲ್ಲಿನ ನಗರಸಭಾ ಸದಸ್ಯರಾದ ಭಾಸ್ಕರ್ ಪ್ರತೀ ಮನೆಗೂ ಆಗಮಿಸಿ ಯೋಜನೆಯ ಉದ್ದೇಶವನ್ನು ಸ್ಥಳೀಯರಿಗೆ ವಿವರಿಸಿ ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಮನವೋಲಿಸಿ ಈ ಕಾರ್ಯವು ಯಶಸ್ವಿಯಾಗಲು ಕಾರಣರಾಗಿದ್ದಾರೆ, ಒಟ್ಟು ಏಳು ವಾರ್ಡ್ ಗಳಲ್ಲಿ ತಪಾಸಣೆ ನೆಡೆಸಿದ್ದೇವೆ ಆದರೆ ಅಲ್ಲಿನ ಸದಸ್ಯರಾರೂ ಸರಿಯಾಗಿ ನಮ್ಮೊಡನೆ ಸ್ಪಂದಿಸಿಲ್ಲ, ಇವರಂತೆ ಇನ್ನುಳಿದ ವಾರ್ಡ್ ಸದಸ್ಯರೂ ಕೂಡ ಸಹಕರಿಸಿದರೆ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂದರು.

Edited By

Ramesh

Reported By

Ramesh

Comments