ಹಾಸನದಲ್ಲಿ ರಾಷ್ಟ್ರ ಮಟ್ಟದ ನೇಕಾರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಶುಭ ಹಾರೈಕೆ

12 Feb 2019 4:31 PM |
573 Report

ದಿನಾಂಕ 16 ಮತ್ತು 17 ಶನಿವಾರ, ಭಾನುವಾರದಂದು ಹಾಸನದಲ್ಲಿ ರಾಷ್ಟ್ರ ಮಟ್ಟದ ನೇಕಾರ ಕಪ್ ಕ್ರಿಕೆಟ್ ಪಂದ್ಯಾವಳಿಗಳನ್ನು ರಾಜ್ಯ ನೇಕಾರ ಯುವ ಬ್ರಿಗೇಡ್, ನೇಕಾರವಾಣಿ ಮತ್ತು ನೇಕಾರ ಸಂಪದ ಪತ್ರಿಕೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ, ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ನಗರದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ವತಿಯಿಂದ ದೇವಲ ಲಯನ್ಸ್ ತಂಡವು ಹೊರಡಲಿದೆ, ಭಾಗವಹಿಸಲಿರುವ ಆಟಗಾರರಿಗೆ ಟ್ರಸ್ಟ್ ಹಿತೈಷಿಗಳಾದ ನಗರದ ಹಿರಿಯ ವಾಣಿಜ್ಯೋದ್ಯಮಿ ಹೆಚ್.ಪಿ. ಶಂಕರ್ ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್ ಮತ್ತು ಶ್ರೀ ಶಿರಡಿ ಸಾಯಿ ಮಂದಿರ ಸೇವಾ ಟ್ರಸ್ಟ್ ಖಜಾಂಚಿ ಕೆ.ಎನ್.ದೇವರಾಜ್ ಟಿ.ಷರ್ಟ್ ಮತ್ತು ಗುರುತಿನ ಪತ್ರ ವಿತರಿಸಿ ಆಟಗಾರರಿಗೆ ಶುಭ ಹಾರೈಸಿದರು.

ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಖಜಾಂಚಿ ದೇ.ರಾ.ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಶಿವಾನಂದ್, ಟ್ರಸ್ಟಿ ಗಳಾದ ಕೆ.ಎಂ.ಕೃಷ್ಣಮೂರ್ತಿ, ಸುಧಾಕರ್ ಹಾಗೂ ಎ.ಜಿ.ಕೆ ಗೋಪಾಲ, ಕೆ.ಎನ್.ಮಹೇಶ್, ಉಮಾಶಂಕರ್, ಆಟಗಾರರಾದ ಹರಿಪ್ರಸಾದ್, ಲಾರ, ನರಸಿಂಹ, ಶಿವಕುಮಾರ್,ಹರೀಶ್,ಶರತ್,ಸುರೇಶ್,ಚಂದ್ರಶೇಕರ್ ಮತ್ತಿತರರು ಹಾಜರಿದ್ದರು.

Edited By

Ramesh

Reported By

Ramesh

Comments