ಮಹಿಳಾ ಮೀಸಲಾತಿ ಸಾಧಕ ಬಾಧಕಗಳ ಕುರಿತು ಸಂವಾದ ಮತ್ತು ವಿಚಾರ ಸಂಕಿರಣ

12 Feb 2019 3:42 PM |
171 Report

ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರ ಕೇಂದ್ರದ ಸಭಾಂಗಣದಲ್ಲಿ ದಿನಾಂಕ ೧೬-೨-೨೦೧೯ ಶನಿವಾರ ಬೆಳಿಗ್ಗೆ ೧೦ ಘಂಟೆಗೆ ಮಹಿಳಾ ಮೀಸಲಾತಿ ಸಾಧಕ ಬಾಧಕಗಳ ಕುರಿತು ಸಂವಾದ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ, ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂ.ಗ್ರಾ.ಜಿಲ್ಲೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಅನಿಲ ಲಕ್ಷ್ಮೀನಾರಾಯಣ್ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಮಹಿಳಾ ಸಮಾಜ ಅಧ್ಯಕ್ಷೆ ಕೆ.ಎಸ್.ಪ್ರಭಾ ವಹಿಸಲಿದಾರೆ, ರಾಜಕೇಯದಲ್ಲಿ ಮಹಿಳಾ ಪ್ರಾತಿನಿಧ್ಯ ಇತಿ-ಮಿತಿಗಳ ಕುರಿತು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಲಿದ್ದಾರೆ, ಮಹಿಳಾ ಮೀಸಲಾತಿ ನೆಡೆದು ಬಂದ ದಾರಿ ಕುರಿತು ಪತ್ರಕರ್ತೆ ಎನ್.ಸತ್ಯ ಮಾತನಾಡಲಿದ್ದಾರೆ, ದೊಡ್ಡಬಳ್ಳಾಪುರ ನಗರ ಸಭಾ ಸದಸ್ಯೆ ಮಂಜುಳಾ ಮತ್ತು ಮಾಜಿ ಸದಸ್ಯೆ ವಸುಂಧರಾ ರೆಡ್ಡಿ ಈ ವಿಷಯಗಳಿಗೆ ಪ್ರತಿಕ್ರಿಯಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂ.ಗ್ರಾ.ಜಿ.ಪಂಚಾಯತ್ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಸದಸ್ಯೆ ಅರುಣಾ ಆನಂದ್, ಪದ್ಮಾವತಿ ಮುನೇಗೌಡ, ದೊಡ್ಡಬಳ್ಳಾಪುರ ತಾ.ಪಂ. ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ಆಗಮಿಸಲಿದ್ದಾರೆ. ಸರ್ವರೂ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕಾರ್ಯದರ್ಶಿ ಎಲ್.ಸಿ.ದೇವಕಿ ಕೋರಿದಾರೆ.

Edited By

Ramesh

Reported By

Ramesh

Comments