ಬೃಹತ್ ವಿಷ್ಣು ಸಹಸ್ರನಾಮ ಪಾರಾಯಣ

12 Feb 2019 3:41 PM |
189 Report

ದಿನಾಂಕ 16-2-2019 ಶನಿವಾರ ಭೀಷ್ಮ ಏಕಾದಶಿಯಂದು ಬನ್ನಿಮಂಗಲ ಶ್ರೀ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣವನ್ನು ಏರ್ಪಡಿಸಲಾಗಿದೆ, ದೊಡ್ದಬಳ್ಳಾಪುರ ನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಾಂಗ ಮಹಿಳಾ ಸಂಘ, ಶ್ರೀ ಸರ್ಕಲ್ ಮಾರಮ್ಮ ಭಜನಾ ಮಂಡಲಿ, ಶ್ರೀ ಸುರಭಿ ಭಜನಾ ಮಂಡಲಿ, ಶ್ರೀ ಅಭಯ ಚೌಡೇಶ್ವರಿ ಭಜನಾ ಮಂಡಲಿ ಸದಸ್ಯರುಗಳು ವಿಷ್ಣು ಸಹಸ್ರನಾಮ ಪಾರಾಯಣ ನೆಡೆಸಿಕೊಡಲಿದ್ದಾರೆ, ಕಾರ್ಯಕ್ರಮವು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾನ್ಹ 12 ಘಂಟೆಯ ವರೆಗೆ ನೆಡೆಯಲಿದೆ, ನಂತರ ಪ್ರಾಕಾರೋತ್ಸ ಹಾಗೂ ಮಹಾಮಂಗಳಾರತಿ ಏರ್ಪಡಿಸಿರುತ್ತದೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀ ಆಂಜನೇಯ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಕೋರಿದ್ದಾರೆ.

Edited By

Ramesh

Reported By

Ramesh

Comments