ಭಕ್ತಿಪೂರ್ವಕ ನುಡಿ ನಮನ ಹಾಗೂ ಖ್ಯಾತ ಗಾಯಕರಿಂದ ವಚನ ಹಾಗೂ ಭಕ್ತಿ ಗೀತೆಗಳ ಗಾಯನ

24 Jan 2019 1:37 PM |
430 Report

ದಿನಾಂಕ 28--01-2019 ರ ಸೋಮವಾರ ಸಂಜೆ 6 ಘಂಟೆಗೆ ದೊಡ್ದಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ರಾಜಕುಮಾರ್ ಕಲಾ ಮಂದಿರದಲ್ಲಿ ದೊಡ್ಡಬಳ್ಳಾಪುರದ ಸಮಸ್ತ ನಾಗರೀಕರು ಹಾಗೂ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಪರವಾಗಿ ಕರ್ನಾಟಕ ರತ್ನ, ತ್ರಿವಿದ ದಾಸೋಹಿ, ಶತಾಯುಷಿ, ನೆಡೆದಾಡುವ ದೇವರು, ಪದ್ಮಭೂಷಣ ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರ ಪಾದಾರವಿಂದಗಳಿಗೆ ಭಕ್ತಿಪೂರ್ವಕ ನುಡಿನಮನಗಳನ್ನು ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಆದರಣೀಯ ಪೂಜ್ಯರಾದಂತಹ ವೀರ ಸಿಂಹಾಸನ ಪೀಠ, ಮೇಲಣ ಗವಿಮಠದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವನಕಲ್ ಮಲ್ಲೇಶ್ವರ ಕ್ಷೇತ್ರ ಪೀಠಾಧ್ಯಕ್ಷರು ಡಾ. ಬಸವರಮಾನಂದ ಸ್ವಾಮೀಜಿ, ಪುಷ್ಪಾಂಡಜ ಮುನಿ ಆಶ್ರಮ, ತಪಸೀಹಳ್ಳಿಯ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ತುಮಕೂರಿನ ಲೇಖಕರು, ಹೊಸಕೆರೆ ರಿಜ್ವಾನ್ ಭಾಷ ಹಾಗೂ ತಾಲ್ಲೂಕಿನ ಗಣ್ಯರು ಆಗಮಿಸಲಿದ್ದಾರೆ,  ಖ್ಯಾತ ಗಾಯಕರಿಂದ ವಚನ ಹಾಗೂ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಕಾರ್ಯಕ್ರಮಕ್ಕೆ ಬಂದು ಭಾಗವಹಿಸಲು ಆಯೋಜಕರು ಕೋರಿದ್ದಾರೆ.

Edited By

Ramesh

Reported By

Ramesh

Comments