ನೆಡೆದಾಡುವ ದೇವರು, ತ್ರಿವಿದ ದಾಸೋಹಿಗೆ ಭಾವಪೂರ್ಣ ಶ್ರದ್ಧಾಂಜಲಿ

22 Jan 2019 2:06 PM |
183 Report

ದಿನಾಂಕ 21-01-2019 ರ ಸೋಮವಾರ ನಿಧನರಾದ ಶ್ರೀ ಶಿವಕುಮಾರಸ್ವಾಮೀಜಿಯವರಿಗೆ ಇಂದು ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿ ನಗರದ ನಾಗರೀಕರಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಬಸ್ ನಿಲ್ದಾಣದ ಅಂಗಡಿ/ ಖಾಸಗಿ ಬಸ್ ಮಾಲೀಕರು, ಬಸ್ ಏಜೆಂಟರುಗಳು, ಊರಿನ ಹಲವಾರು ಸಂಘಟನೆಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು, ನಗರೇಶ್ವರ ಸೇವಾ ಸಮಿತಿ ಟ್ರಸ್ಟ್, ವೀರಶೈವ ಸಂಘ, ಅಯೋಧ್ಯಾನಗರ ಶಿವಾಚಾರ್ಯ ಸಂಘ, ರಕ್ಷಣಾ ವೇದಿಕೆ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರ ಸಭಾಧ್ಯಕ್ಷ ತ.ನ.ಪ್ರಭುದೇವ್ ನುಡಿನಮನ ಸಲ್ಲಿಸಿ ಮಾತನಾಡಿ ಪೂಜ್ಯರು ಜಾತಿ ಭೇದವಿಲ್ಲದೆ ಅನ್ನ, ಅಕ್ಷರ ದಾಸೋಹ ಮಾಡಿದ ಶ್ರೀಗಳ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.

ಭಾರತೀಯ ಜನತಾ ಪಕ್ಷ, ಜೆಡಿಎಸ್, ಮತ್ತು ಕಾಂಗ್ರೆಸ್ ಕಛೇರಿಗಳಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ನಗರಸಭಾ ಕಾರ್ಯಲಯದಲ್ಲಿ ಎಲ್ಲಾ ನಗರಸಭಾ ಸದಸ್ಯರೂ ಮತ್ತು ಸಿಬ್ಬಂದಿ ವರ್ಗ ಸೇರಿ ನೆಡೆದಾಡುವ ದೇವರಿಗೆ ಪುಷ್ಪನಮನ ಸಲ್ಲಿಸಿದರು.  ಕರ್ನಾಟಕ ರಾಜ್ಯ ನೇಕಾರ ರಕ್ಷಣಾ ವೇದಿಕೆ ತಂಡದಿಂದ ತೇರಿನ ಬೀದಿಯಲ್ಲಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ನಗರದ ವಿವಿಧ ಕಡೆಗಳಲ್ಲಿ ಶ್ರೀಗಳಿಗೆ ನೆನ್ನೆಯಿಂದಲೇ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮಗಳನ್ನು ಸ್ಥಳೀಯರೇ ಏರ್ಪಡಿಸುತ್ತಿದ್ದರು, ಶ್ರೀಗಳ ಗೌರವಾರ್ಥ ಇಂದು ನಗರದ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಮಾಲೀಕರೇ ಮುಚ್ಚಿದ್ದರು, ಖಾಸಗೀ ಬಸ್ ಮಾಲೀಕರು ಬೆಳಗಿನಿಂದಲೇ ಶ್ರೀಗಳ ದರ್ಶನಕ್ಕೆ ಹೋಗುವ ಭಕ್ತರಿಗೆ ಉಚಿತವಾಗಿ ತಮ್ಮ ಬಸ್ ಗಳಲ್ಲಿ ಕಳುಹಿಸುತ್ತಿದ್ದರು.

 

Edited By

Ramesh

Reported By

Ramesh

Comments