ದೋಸ್ತಿ ಸರ್ಕಾರದ ನಾಯಕರಿಗೆ ಹೆದರಿ ಹಿಂದೆ ಸರಿದ ‘ಕಮಲ’ ಪಡೆ..!! ಬೆಂಕಿ ಜೊತೆ ಸರಸ ಬೇಡ ಅಂದಿದ್ಯಾಕೆ ಹೈ ಕಮಾಂಡ್..!!!

17 Jan 2019 4:44 PM |
1408 Report

ರಾಜಕೀಯ ವಲಯದಲ್ಲಿ ಇದೀಗ ಹೆಚ್ಚಾಗಿ  ಕೇಳಿ ಬರುತ್ತಿರುವ ಶಬ್ದವೆಂದರೆ ಅದು ಆಪರೇಷನ್ ಕಮಲ…. ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ.. ಇದೀಗ ಬಿಜೆಪಿಯ ಆಪರೇಷನ್ ಕಮಲ ಕುರಿತಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಕೂಡ ಪ್ರತಿಕ್ರಿಯೆ ನೀಡಿದ್ದು, ಯಾರನ್ನೂ ಹಿಡಿದಿಟ್ಟುಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. ನಾನು ಆಪರೇಷನ್ ಕಮಲದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಆದರೆ ಆಪರೇಷನ್ ಕಮಲ ಮಾಡಲು ಹೋಗಿ ತನ್ನಾ ಖೆಡ್ಡಾವನ್ನು ತಾನೆ ತೋಡಿಕೊಂಡಿದೆ ಬಿಜೆಪಿ. ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರನ್ನು ತನ್ನತ್ತ ಸೆಳೆಯಲು ಆಪರೇಷನ್ ಕಮಲ ಶುರು ಮಾಡಿದರು.. ದೋಸ್ತಿ ಸರ್ಕಾರ ರಚನೆಯಾದ ದಿನದಿಂದಲೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರವನ್ನು ಉರುಳಿಸಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಲೆ ಇದೆ ಬಿಜೆಪಿ ಸರ್ಕಾರ.. ಇದ್ದಕ್ಕಿಂತ ಬಿಜೆಪಿ ಸರ್ಕಾರವು ನಾವು ವಿರೋಧ ಪಕ್ಷದಲ್ಲಿಯೇ ಕೂತು ಕೆಲಸಗಳನ್ನು ಮಾಡ್ತೇವೆ ಎಂದಿತ್ತು.. ಬಹಿರಂಗವಾಗಿ ಸಂಕ್ರಾಂತಿಗೆ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಬಾಯಿ ಬಿಟ್ಟಿಲ್ಲವಾದರೂ ತೆರೆಮರೆಯಲ್ಲಿ  ಈ ರೀತಿಯ ಕೆಲಸಗಳನ್ನು ಬಿಜೆಪಿ ಮಾಡುತ್ತಲೆ ಇತ್ತು..  ಆದರೆ ಇದೀಗ ಬಿಜೆಪಿ  ಅಪ್ಪ ಮಕ್ಕಳ ಮಧ್ಯೆ ಹೋಗೋದು ಬೇಡ. ಅವರು ಒಂಥರಾ ಬೆಂಕಿ ಇದ್ದ ಹಾಗೆ.. ಬೆಂಕಿ ಜೊತೆ ಸರಸ ಬೇಡ ಎಂಬುದು ಬಿಜೆಪಿಗೆ ಅರಿವಾಗಿದೆ..ಅಷ್ಟೆ ಅಲ್ಲದೆ ಮತ್ತೆ ಆಪರೇಷನ್ ಕಮಲ ಮಾಡಲು ಹೋದ್ರೆ ಒಕ್ಕಲಿಗರ ಕೆಂಗಣ್ಣಿಗೆ ಗುರಿಯಾಘೋದು ಗ್ಯಾರೆಂಟಿ ಎಂಬುದು ಬಿಜೆಪಿಯವರಿಗೆ ಅರ್ಥವಾಗಿದೆ..

Edited By

hdk fans

Reported By

hdk fans

Comments