ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹೆಚ್ ಡಿ ಕುಮಾರಸ್ವಾಮಿ ..!! 6 ಬಿಜೆಪಿ ಶಾಸಕರು ಜೆಡಿಎಸ್ ಸಂಪರ್ಕದಲ್ಲಿ..? ಯಾರ್ಯಾರು ಗೊತ್ತಾ..?

16 Jan 2019 10:27 AM |
9073 Report

ಈಗಾಗಲೇ ಇರುವ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪಕ್ಷ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ.. ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಕ್ಕೆ ಜೆಡಿಎಸ್‌ ತಿರುಗೇಟು ನೀಡಲು ಇದೀಗ ಮುಂದಾಗಿದ್ದು, ಮೈತ್ರಿ ಪಕ್ಷಗಳ ಶಾಸಕರಿಗೆ ಬಿಜೆಪಿ ಗಾಳ ಹಾಕಿದ ಬೆನ್ನಲ್ಲೇ ಜೆಡಿಎಸ್‌ ಪಕ್ಷವು ಸಹ ಬಿಜೆಪಿಯ ಆರು ಶಾಸಕರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ. ಬಿಜೆಪಿ ಆರು ಶಾಸಕರು ಜೆಡಿಎಸ್‌ನ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಸಚಿವ ಸಾ.ರಾ.ಮಹೇಶ್‌ ಹೊಸ ಬಾಂಬ್‌ ಸ್ಫೋಟಿಸಿದ್ದಾರೆ.

ಪದ್ಮನಾಭನಗರದಲ್ಲಿ ಮಂಗಳವಾರ ರಾತ್ರಿ ಜೆಡಿಎಸ್ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ದೆಹಲಿ ಬಳಿಯ ಗುರುಗ್ರಾಮದ ಹೋಟೆಲ್ನಲ್ಲಿರುವ ಶಾಸಕರು ಹೊರಬರಲಿ. ಆಗ ನಮ್ಮ ಸಂಪರ್ಕದಲ್ಲಿರುವ ಆರು ಶಾಸಕರು ಯಾರೆಂಬುದನ್ನು ತಿಳಿಸುತ್ತೇವೆ ಎಂದರುಬಿಜೆಪಿಯವರು ಹೊರಬಂದ ಮೇಲೆ ನಮ್ಮ ಆಟ ಶುರುವಾಗುತ್ತದೆ ಎಂದು ಬಹಳ ಗಂಭೀರವಾಗಿ ತಿಳಿಸಿದರು….

Edited By

hdk fans

Reported By

hdk fans

Comments