ಹಿಂದೂಗಳೆಲ್ಲಾ ಒಂದಾಗಬೇಕು...ಮಾಜಿ ಸೈನಿಕ ಶಿವಶಂಕರ್

14 Jan 2019 5:25 PM |
351 Report

ವಿವೇಕಾನಂದ ಜಯಂತಿ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಮತ್ತು ರಾಷ್ಟ್ರೋತ್ತಾನ ರಕ್ತನಿಧಿ ಜೊತೆಗೂಡಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ದೊಡ್ಡಬಳ್ಳಾಪುರ ನಗರದ ಕೋಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ನಂಜುಂಡೇಶ್ವರ ಕಲ್ಯಾಣ ಮಂದಿರದಲ್ಲಿ ದಿನಾಂಕ 14-01-2019 ಸೋಮವಾರದಂದು ಬೆಳಿಗ್ಗೆ 9 ಘಂಟೆಯಿಂದ ಸಂಜೆ 4 ಘಂಟೆಯವರೆಗೆ ಏರ್ಪಡಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸೈನಿಕ ಶಿವಶಂಕರ್ ನೆರವೇರಿಸಿದರು, ರಾಷ್ಟ್ರೋತ್ತಾನ ರಕ್ತನಿಧಿ ಸಂಚಾಲಕ ನರಸಿಂಹಜೋಷಿ, ನಗರಸಭಾ ಸದಸ್ಯರಾದ ಕೆ.ಬಿ. ಮುದ್ದಪ್ಪ, ಹೆಚ್.ಎಸ್.ಶಿವಶಂಕರ್, ಹಿರಿಯ ಮುಖಂಡ ವೆಂಕಟಾಚಲಯ್ಯ, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಹಿಂದೂ ಜಾಗರಣ ವೇದಿಕೆ ನಗರ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೋತ್ತಾನ ರಕ್ತನಿಧಿ ಸಂಚಾಲಕ ನರಸಿಂಹಜೋಷಿ ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿದರು, ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ತಪ್ಪದೇ ಮಾಡಿ, ಅದರಿಂದಾಗಿ ಹೃದಯ ಸಂಭಂದಿ ಕಾಯಿಲೆಗಳು ಶೇ. ಎಂಬತ್ತರಷ್ಟು ದೂರಾಗುತ್ತವೆ ಎಂದರು. 186 ಮಂದಿ ದಾನಿಗಳು ರಕ್ತದಾನ ಮಾಡಿದರು. ಹಿಂದೂಜಾಗರಣ ವೇದಿಕೆ ರಾಜ್ಯ ಕಾರ್ಯದರ್ಶಿ ಬಸವರಾಜ್, ಬೆಂ.ಗ್ರಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್, ನಗರ ಪ್ರಧಾನ ಕಾರ್ಯದರ್ಶಿ ಗುಣಸಾಗರ್, ತಾ.ಪ್ರಧಾನ ಕಾರ್ಯದರ್ಶಿ ಅರುಣ್, ರಾಮು,ಮೋಹನ್,ಸತೀಶ,ಮುರುಳಿ,ಸೊಣ್ಣಪನಹಳ್ಳಿ ಪುನೀತ್, ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚ ಉಪಾಧ್ಯಕ್ಷ ಶಿವು, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಕಾರ್ಯದರ್ಶಿ ದಾಕ್ಷಾಯಿಣಿ, ಉಮಾಮಹೇಶ್ವರಿ, ಲೀಲಾಮಹೇಶ್ ಮತ್ತಿತರರು ಹಾಜರಿದ್ದರು.

Edited By

Ramesh

Reported By

Ramesh

Comments