ಬಿಜೆಪಿ ನಾಯಕನ ಮಾತಿಗೆ ಸರಿಯಾಗಿಯೇ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ..!!

10 Jan 2019 2:50 PM |
1132 Report

ಮೈತ್ರಿ  ಸರ್ಕಾರ ರಚನೆಯಾದ ದಿನದಿಂದ ಕೂಡ ಯಾವುದಾದರೊಂದು ಅಡ್ಡಿ ಆತಂಕ ಬರುತ್ತಲೆ ಇದೆ.. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕುಮಾರಸ್ವಾಮಿಯವರು ಯಾವುದೇ ಅಡೆತಡೆ ಇಲ್ಲದೆ ಸರ್ಕಾರ ನಡೆಯಲಿದೆ ಎಂದು ತಿಳಿಸಿದರು.ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿಯವರು , ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಚರ್ಚಿತವಾದ ವಿಚಾರಗಳೇ ಬೇರೆ. ಆದರೆ ಮಾಧ್ಯಮಗಳಲ್ಲಿ ವರದಿಯಾಗಿದ್ದೇ ಬೇರೆ.

ಸಮ್ಮಿಶ್ರ ಸರ್ಕಾರದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದೆಲ್ಲ ಹೇಳಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದರು. ಯಾವುದೇ ಅಡೆತಡೆ ಇಲ್ಲದೆ ಮೈತ್ರಿ ಸರ್ಕಾರ ಆರಾಮಾಗಿ ನಡೆಯಲಿದ್ದು, ಸರ್ಕಾರದ ಬಗ್ಗೆ ಯಾವುದೇ ಅಪನಂಬಿಕೆ ಬೇಡ ಎಂದು ತಿಳಿಸಿದರು.. ಕೇಂದ್ರ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್‍ನಲ್ಲಿದ್ದಾಗ ಬಿಜೆಪಿಯವರ ವಿರುದ್ಧ ಮಾತನಾಡುತ್ತಿದ್ದರು. ಈಗ ಮತ್ತೆ ಬಿಜೆಪಿಯಲ್ಲಿರುವರು. ಹಾಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ.ಇದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಸರಿಯಾಗಿಯೇ ಟಾಂಗ್ ಕೊಟ್ಟರು..

Edited By

hdk fans

Reported By

hdk fans

Comments