ಅಂಕುರಾರ್ಪಣೆ.... ಕರ್ನಾಟಕ ಸರ್ಕಾರ ಮತ್ತು ದೇವಾಂಗ ಮಂಡಲಿ ವತಿಯಿಂದ

09 Jan 2019 9:12 AM |
244 Report

ದಿನಾಂಕ 8-1-2019 ಮಂಗಳವಾರದಂದು ಸಂಜೆ ಎಂಟು ಘಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಕರ್ನಾಟಕ ಸರ್ಕಾರ ಮತ್ತು ದೇವಾಂಗ ಮಂಡಲಿ ವತಿಯಿಂದ ಅಂಕುರಾರ್ಪಣೆ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶ್ರೀ ಕ್ಷೇತ್ರ ಘಾಟಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಸುಬ್ರಮಣ್ಯ ಮತ್ತು ತಂಡದವರು ದೊಡ್ಡಬಳ್ಳಾಪುರ ದೇವಾಂಗ ಮಂಡಲಿ ನೀಡುವ ಧ್ವಜಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ ದಿನಾಂಕ 12ರ ಶನಿವಾರದಂದು ನೆಡೆಯಲಿರುವ ಶ್ರೀ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಘಾಟಿ ಕ್ಷೇತ್ರ ವ್ಯವಸ್ಥಾಪಕ ಸಮಿತಿಯ ಗೌರವ ಅಧ್ಯಕ್ಷ ಚನ್ನಪ್ಪ, ಅಧ್ಯಕ್ಷ ಜಗನ್ನಾಥಾಚಾರ್, ಇ.ಓ. ಕೃಷ್ಣಪ್ಪ ದೇವಾಂಗ ಮಂಡಲಿಯ ಹಂಗಾಮಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಚಿಕ್ಕಣ್ಣ, ಕಾರ್ಯದರ್ಶಿ ಕೇಶವ, ಸಹಕಾರ್ಯದರ್ಶಿ ನಟರಾಜ್, ನಿರ್ದೇಶಕರಾದ ಅಖಿಲೇಶ್, ರಘು, ನಟರಾಜ್, ಪ್ರಭಾಕರ್, ಶೀಲ, ವರಲಕ್ಷ್ಮಿ, ಶ್ರೀದೇವಿ, ನಿರ್ಮಲ ದೊಡ್ಡಬಳ್ಳಾಪುರದ ನಾಗರೀಕರು ಸೇರಿದಂತೆ ಘಾಟಿಯ ಸುತ್ತಮುತ್ತಲಿನ ಊರುಗಳ ಸಾವಿರಾರು ಮಂದಿ ಭಕ್ತಾದಿಗಳು ಹಾಜರಿದ್ದರು.

Sponsored

Edited By

Ramesh

Reported By

Ramesh

Comments