ಎರಡು ದಿನಗಳ ಭಾರತ ಸಾರ್ವತ್ರಿಕ ಮುಷ್ಕರ..

09 Jan 2019 8:16 AM |
126 Report

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಮುಷ್ಕರ...? ಬಂದ್... ದೊಡ್ಡಬಳ್ಳಾಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆ.ಎಸ್.ಆರ್.ಟಿ.ಸಿ. ಬಿ.ಎಂಟಿ.ಸಿ ಮತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ನಿಲ್ಲಿಸಿದ್ದರು. ರಾಷ್ಟ್ರೀಕೃತ ಬ್ಯಾಂಕ್ ನೌಕರರು ಬಂದ್ ಬೆಂಬಲಿಸಿದ್ದರು, ಸರ್ಕಾರಿ ಕಚೇರಿಗಳಲ್ಲಿ ಹಾಗರಾತಿ ಕಡಿಮೆ ಇತ್ತು, ಹಳೇ ಬಸ್ ನಿಲ್ದಾಣದಲ್ಲಿನ ಮತ್ತು ಮಾರ್ಕೆಟ್ ಅಂಗಡಿಗಳು ಭಾಗಶಃ ಮುಚ್ಚಿದ್ದವು, ಬೆಳಿಗ್ಗೆಯಿಂದಲೇ ಸಂಘಟಕರು ಬೈಕ್ ಗಳಲ್ಲಿ ತಿರುಗಿ ತೆಗೆದಿದ್ದ ಅಂಗಡಿಗಳನ್ನು ಮುಚ್ಚಿಸಿದರು, ರೈಲ್ವೆ ಸ್ಟೇಷನ್ ಸರ್ಕಲ್, ಡಿ.ಕ್ರಾಸ್, ಟಿ.ಬಿ. ಸರ್ಕಲ್ ಮತ್ತಿತರಕಡೆ ಜನ ಜೀವನ ಎಂದಿನಂತೆ ಇತ್ತು. ಬಾಷೆಟ್ಟಿಹಳ್ಳಿಯ ಫ್ಯಾಕ್ಟರಿಗಳು, ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದರು. ಎಂದಿನಂತೆ ತೆರೆದಿದ್ದ ಹೆಚ್.ಡಿ.ಎಫ್.ಸಿ ಬ್ಯಾಂಕ್ ಹತ್ತಿರ ಹೋಗಿ ಸಂಘಟಕರು ಬಾಗಿಲು ಹಾಕಿಸುತ್ತಿದ್ದರು. ಮಧ್ಯಾನ್ಹದ ನಂತರ ಜನ ಜೀವನ ಸಹಜ ಸ್ಥಿತಿಗೆ ಮರಳಿತು.

ಸಿದ್ದಲಿಂಗಯ್ಯ ವೃತ್ತದಲ್ಲಿ ಬೆಳಿಗ್ಗೆ ಹತ್ತು ಘಂಟೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಬಹಿರಂಗ ಸಭೆ ಏರ್ಪಡಿಸಲಾಗಿತ್ತು, ಜಿಲ್ಲಾ ಕಾರ್ಯದರ್ಶಿ ಸತ್ಯಾನಂದ ಮಾತನಾಡಿ ಕಾರ್ಮಿಕರ ನ್ಯಾಯಯುತವಾದ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರೂ ಯಾವ ಸಚಿವರೂ ಕಾರ್ಮಿಕರೊಂದಿಗೆ ಮಾತನಾಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಮುಷ್ಕರ ಅನಿವಾರ್ಯವಾಯಿತು ಎಂದರು. ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

Edited By

Ramesh

Reported By

Ramesh

Comments