ಪರಿಸರ ಪ್ರೇಮಿಗಳಿಂದ 4ಕೆ ಮ್ಯಾರಥಾನ್ ಓಟ

06 Jan 2019 11:53 AM |
413 Report

"ಪರಿಸರಕ್ಕಾಗಿ ಓಟ" 4ಕೆ ಮ್ಯಾರಥಾನ್ ಓಟವನ್ನು 6-01-2019 ರ ಭಾನುವಾರ ಬೆಳಿಗ್ಗೆ 6-30 ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಸುಚೇತನ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ [ರಿ.] ರವರಿಂದ ಆಯೋಜಿಸಲಾಗಿತ್ತು. ಮ್ಯಾರಥಾನ್ ಉದ್ಘಾಟನೆಯನ್ನು ಬೆಂ.ಗ್ರಾ.ಜಿಲ್ಲಾಧಿಕಾರಿ ಕರೀಗೌಡ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ ನಗರಸಭಾಧ್ಯಕ್ಷ ತ.ನ.ಪ್ರಭುದೇವ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅರದೇಶ ಹಳ್ಳಿಯ ಪರಿಸರವಾದಿ ಸೀತಾರಾಂ,ನಗರಸಭಾ ಸದಸ್ಯ ಎಂ.ಶಿವಕುಮಾರ್, ಸಾಹಿತಿ ಎಂ.ಜಿ.ಚಂದ್ರಶೇಕರಯ್ಯ ಆಗಮಿಸಿದ್ದರು. 180 ಮಂದಿ ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದ ಈ ಮ್ಯಾರಥಾನ್ ಓಟಕ್ಕೆ ಕೋಲಾರ ಜಿಲ್ಲೆಯ ಬಂಗಾರಪೇಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನೆಲಮಂಗಲ, ಹೊಸಕೋಟೆಯಿಂದ ಸ್ಪರ್ಧಿಗಳು ಆಗಮಿಸಿದ್ದರು. ಹೊಸಕೋಟೆಯ ಲಕ್ಷ್ಮಣ್ ಪುರುಷರ ಮತ್ತು ಬಂಗಾರಪೇಟೆಯ ಲಾವಣ್ಯ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದರೆ, ಬಂಗಾರಪೇಟೆಯ ಶ್ರೀಕಾಂತ್ ಮತ್ತು ಚೈತ್ರ ದ್ವಿತೀಯ ಸ್ಥಾನ ಪಡೆದರೆ, ಬಂಗಾರಪೇಟೆಯ ಶರಣಬಸವ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಮೋಪರಹಳ್ಳಿಯ ಅನುರಾಧ ತೃತೀಯ ಸ್ಥಾನ ಗಳಿಸಿದರು.

ಮ್ಯಾರಥಾನ್ ಓಟ ನಗರದ ಸಿದ್ದಲಿಂಗಯ್ಯ ವೃತ್ತದಿಂದ ಹೊರಟು ಆಸ್ಪತ್ರೆ ಸರ್ಕಲ್, ಅಯ್ಯಪ್ಪ ದೇವಸ್ಥಾನದ ರಸ್ತೆ, ಡಿ.ಕ್ರಾಸ್, ಕೋರ್ಟ್ ರಸ್ತೆ, ರುಮಾಲೆ ವೃತ್ತ, ತಾಲ್ಲೂಕು ಕಛೇರಿ ಸರ್ಕಲ್ ಮೂಲಕ್ ಭಗತ್ ಸಿಂಗ್ ಸ್ಟೇಡಿಯಂ ನಲ್ಲಿ ಕೊನೆಗೊಂಡಿತು.  ಸಮಾರೋಪ ಸಮಾರಂಭದಲ್ಲಿ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಕರೀಗೌಡ ಮತ್ತು ನಗರಸಭಾಧ್ಯಕ್ಷ ತ.ನ.ಪ್ರಭುದೇವ್ ರವರಿಂದ ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಯಿತು.

ಜಿಲ್ಲಾಧಿಕಾರಿ ಕರೀಗೌಡ, ನಗರಸಭಾಧ್ಯಕ್ಷ ಪ್ರಭುದೇವ್, ನಗರಸಭಾ ಸದಸ್ಯ ಶಿವಕುಮಾರ್ ಸ್ಪರ್ಧಿಗಳ ಜೊತೆಯಲ್ಲಿ ಸ್ವಲ್ಪದೂರ ಓಡಿ ಸ್ಪರ್ಧಾಳುಗಳಿಗೆ ಸ್ಪೂರ್ತಿ ತುಂಬಿದರು, ಪರಿಸರ ಹಾಗೂ ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಸುಚೇತನ ಟ್ರಸ್ಟ್ ಚೇರ್ಮನ್ ಮಂಜುನಾಥ್, ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ನವೀನ್, ಖಜಾಂಚಿ ಅನಿಲ್, ಟ್ರಸ್ಟೀಗಳಾದ ಶ್ರೀನಿಧಿ, ಲೋಕೇಶ್, ಶರಣ್, ಭರತ್, ಪ್ರದೀಪ್ ಮತ್ತಿತರರು ಹಾಜರಿದ್ದರು. 

Edited By

Ramesh

Reported By

Ramesh

Comments