ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಕೇರಳ ಕಮ್ಯುನಿಷ್ಟ್ ಸರ್ಕಾರದ ವಿರುದ್ಧ ಪ್ರತಿಭಟನೆ

04 Jan 2019 2:12 PM |
1365 Report

ಜನವರಿ 2ರಂದು ಇಬ್ಬರು ಕಮ್ಯೂನಿಷ್ಟ್ ಮಹಿಳೆಯರು ಬೆಳಗಿನ ಜಾವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಿ ದೇವಸ್ಥಾನವನ್ನುಅಪವಿತ್ರಗೊಳಿಸಿ ದೇವಸ್ಥಾನದ ಸಂಪ್ರದಾಯವನ್ನು ಮುರಿದಿರುತ್ತಾರೆ, ಇದಕ್ಕೆ ಅಲ್ಲಿನ ಕೇರಳ ಕಮ್ಯುನಿಷ್ಟ್ ಸರ್ಕಾರ ಸಹಕಾರ ನೀಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ಆಗುತ್ತಿದೆ. ಅದರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಇಂದು ದೊಡ್ಡಬಳ್ಳಾಪುರ ಹಳೆ ಬಸ್ ನಿಲ್ದಾಣದ ಬಳಿ ಬೆಳಗ್ಗೆ 11ಗಂಟೆಗೆ ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಘಟಕ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಘಾಟಿ ಗೋಶಾಲಾ ಮುಖ್ಯಸ್ತ ಜೀವನ್ ಮಾತನಾಡಿ ಕರ್ನಾಟಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಹೇಗೋ ಕೇರಳಕ್ಕೆ ಶಬರಿಮಲೆ, ಇಲ್ಲಿನ ನಂಬಿಕೆ, ಆಚಾರಗಳನ್ನು ಕಮ್ಯೂನಿಷ್ಟ್ ಸರ್ಕಾರ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ, ಈಗ ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವಂತೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದ ಇಬ್ಬರು ಕ್ರಿಶ್ಚಿಯನ್ ಮಹಿಳೆಯರನ್ನು ರಾತ್ರೋರಾತ್ರಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಲು ಅನುವುಮಾಡಿಕೊಟ್ಟು ಅಸಂಖ್ಯಾತ ಅಯ್ಯಪ್ಪ ಭಕ್ತರಿಗೆ ನೋವನ್ನುಂಟುಮಾಡಿದೆ, ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಕೆಳಗಿಳಿಸಿ ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

ಬಾಜಪ ತಾಲ್ಲೂಕು ಓಬಿಸಿ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ಇದು ಕೇರಳ ಕಮ್ಯೂನಿಷ್ಟ್ ಸರ್ಕಾರ ಪೋಲೀಸರ ಸಹಕಾರದೊಂದಿಗೆ ಬಹುಸಂಖ್ಯಾತ ಹಿಂದೂಗಳ ನಂಬಿಕೆಗಳ ಮೇಲೆ ಮಾಡಿರುವ ಅತ್ಯಾಚಾರ, ಬಹು ಸಂಖ್ಯಾತ ಜನರ ಭಾವನೆಗಳಿಗೆ ಬೆಲೆ ಕೊಡದೆ ಶಬರಿಮಲೆ ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳುಮಾಡಲು ವ್ಯವಸ್ಥಿತವಗಿ ಸಂಚು ರೂಪಿಸಿ ತುರಾತುರಿಯಲ್ಲಿ ಕ್ರಿಶ್ಚಿಯನ್ ಮಹಿಳೆಯರನ್ನು ದೇಗುಲಕ್ಕೆ ಕಳುಹಿಸುವ ಅಗತ್ಯ ಏನಿತ್ತು? ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಮಹದೇವಯ್ಯ ಮಾತನಾಡಿ ಕಳೆದ 47 ವರ್ಷಗಳಿಂದ ನಾನೂ ಕೂಡ ಮಾಲಾಧಾರಿಯಾಗಿ ಅಯ್ಯಪ್ಪ ಸನ್ನಿಧಿಗೆ ಹೋಗುತ್ತಿದ್ದೇನೆ, ಅಲ್ಲಿನ ವ್ರತ ನಿಯಮ ಅತ್ಯಂತ ಕಟ್ಟು ನಿಟ್ಟಿನದು, ಎಲ್ಲೂ ಲೋಪವಾಗದಂತೆ  ಎಂಟು ನೂರು ವರ್ಷಗಳಿಂದ ವ್ರತ ಆಚರಿಸಿಕೊಂಡು ಬರುತ್ತಿದ್ದಾರೆ, ಹಾಗಿರುವಾಗ ಕೇರಳ ಸರ್ಕಾರದ ನಡೆ ಖಂಡನೀಯ, ನಾವೆಲ್ಲರೂ ಒಂದಾಗಿ ಹೋರಾಡದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಆಚರಣೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.  

ನಮ್ಮಲ್ಲಿದ್ದ ಸ್ವಾಭಿಮಾನ ಸತ್ತುಹೋಗಿದೆಯಾ? ನಮೋ ಸೇನೆ ಸ್ಥಾಪಕ ಕೆಂಪೇಗೌಡ ಆಕ್ರೋಶ ಜಾತಿಗಳ ವಿಚಾರ ಬಂದಾಗ ಎದ್ದೇಳುವ ನಾವು ಹಿಂದೂತ್ವಕ್ಕೆ ಅಪಮಾನವಾಗುವ ಸಮಯದಲ್ಲಿ ಹೇಡಿಗಳಂತ್ತೆ ಮಲಗುವುದು ಎಷ್ಟರ ಮಟ್ಟಿಗೆ ಸರಿ?  ರಾಜಕೀಯ ಪಕ್ಕಕ್ಕಿಡಿ ಧರ್ಮಕ್ಕೋಸ್ಕರ ಹೋರಾಡಿ, ನಮ್ಮ ಮುಂದಿನ ದಿನಗಳು ಹೀಗೆ ಕಳೆದರೆ ನಮ್ಮಗಳ ಮನೆಯ ಹೆಣ್ಣುಮಕ್ಕಳ ಹಣೆಯ ಮೇಲಿನ ತಿಲಕ ಇಲ್ಲದಂತಾಗಬಹುದು.  ಹಿಂದೂತ್ವ, ಹಿಂದೂಗಳ ಮೇಲೆ ಅನ್ಯಧರ್ಮೀಯರಿಗಿಂತ ನಮ್ಮಲ್ಲೇ ಇರುವ ಕೆಲವು ವ್ಯಕ್ತಿಗಳ ದಬ್ಬಾಳಿಕೆ ಮಿತಿ ಮೀರುತ್ತಿದೆ.  ನಮ್ಮ ಆಚರಣೆ ವಿಚಾರಗಳ ಮೇಲೆ ಅನ್ಯಧರ್ಮೀಯರು ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ, ಇದಕ್ಕೆ ಸಹಕಾರ ನೀಡುವವರೂ ಹಿಂದೂಗಳೇ.  ಹಿಂದುತ್ವ ಬಿಜೆಪಿಗರ ಸ್ವತ್ತಲ್ಲ... ನಾವೂ ಹಿಂದೂಗಳೇ ಎಂದೇ ಹೇಳುವ ಕಾಂಗ್ರೆಸ್, ಜೆಡಿಎಸ್ ನಾಯಕ ಕಾರ್ಯಕರ್ತ ಸಹೋದರರೇ ಧರ್ಮದ ಆಚರಣೆಗಾಗಿ, ಉಳಿವಿಗಾಗಿ ಹೊರಗೆ ಬನ್ನಿ,  ಹಿಂದೂತ್ವ ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ ಎಂದು ಸಾರೋಣ ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು, ನಮೋ ಸೇನೆಯ ಎಲ್ಲ ಕಾರ್ಯಕರ್ತರು, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು, ಭಾರತೀಯ ಜನತಾ ಪಕ್ಷದ ತಾಲ್ಲೂಕು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಮಹದೇವಯ್ಯ ಮತ್ತು ಪಾದಾಧಿಕಾರಿಗಳು, ನೂರಾರು ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಿದ್ದರು, ಪ್ರತಿಭಟನೆಯ ವೇಳೆ ದಾರಿಯುದ್ದಕ್ಕೂ ಪಿಣರಾಯಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ, ಅಯ್ಯಪ್ಪ ಭಜನೆಗಳನ್ನು ಹಾಡುತ್ತಾ ಸಾಗಿ ತಾಲ್ಲೂಕು ಕಛೇರಿಯಲ್ಲಿ ವಕೀಲ ರವಿ ಮಾವಿನಕುಂಟೆ ಎಲ್ಲರ ಸಮ್ಮುಕದಲ್ಲಿ ಮನವಿ ಪತ್ರ ಓದಿ ತಾಲ್ಲೂಕು ದಂಡಾಧಿಕಾರಿ ಮೋಹನ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಧರ್ಮೋ ರಕ್ಷತಿ ರಕ್ಷಿತಃ

Edited By

Ramesh

Reported By

Ramesh

Comments