ದೋಸ್ತಿ ಸರ್ಕಾರದ ರಾಜ್ಯ ಬಜೆಟ್’ಗೆ ಮೂಹೂರ್ತ ಫಿಕ್ಸ್..!?

04 Jan 2019 1:12 PM |
125 Report

ದೋಸ್ತಿ ಸರ್ಕಾರದ ಸಚಿವ ಸಂಪುಟದ ಮನಸ್ತಾಪದ ಮಧ್ಯೆಯು  ಇದೀಗ ಸಿಎಂ ಕುಮಾರಸ್ವಾಮಿಯವರು ಬಜೆಟ್ ಮಂಡಿಸುವುದಾಗಿ ತಿಳಿಸಿದ್ದಾರೆ..ಪ್ರತಿಪಕ್ಷಗಳ ಎಲ್ಲಾ ಟೀಕೆಗಳಿಗೂ ಉತ್ತರ ಸಿಗುವ ದಿನ ಅಂದೆ ಆಗಿರುತ್ತದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ..ಫೆಬ್ರವರಿ 8 ರಂದು ರಾಜ್ಯ ಬಜೆಟ್ ನಡೆಸುವುದಾಗಿ ತಿಳಿಸಿದ್ದಾರೆ..

ಫೆಬ್ರವರಿ 8 ರಂದು ರಾಜ್ಯ ಬಜೆಟ್ ನಡೆಸುವುದಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ರೈತರ ಸಾಲಮನ್ನಾ ಕುರಿತಂತೆ ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲಾ ಟೀಕೆಗೆ ಉತ್ತರ ಕೊಡಲು ಮುಂದಾಗಿದ್ದಾರೆ. ಬರುವ ಫೆಬ್ರವರಿ 8 ರಂದು ಬಜೆಟ್ ನಲ್ಲಿ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವುದಾಗಿಯೂ ಕೂಡ ತಿಳಿಸಿದ್ದಾರೆ..ಬಜೆಟ್ ವೇಳೆ ಸಾಲಮನ್ನಾ ಯೋಜನೆಯ ಪೂರ್ಣಮೊತ್ತ 46 ಸಾವಿರ ಕೋಟಿ ರೂವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಚುಕ್ತಾ ಮಾಡುವ ಬಗ್ಗೆ ಪ್ರಕಟಿಸಲಾಗುವುದು  ಎಂದು ತಿಳಿಸಿದ್ದಾರೆ.

Edited By

hdk fans

Reported By

hdk fans

Comments