ಸಿಎಂ ಮಾತಿಗೆ ಬೆಲೆ ಕೊಡದೆ, ಸೂಪರ್ ಸಿಎಂ ಆದ ಎಚ್ ಡಿ ರೇವಣ್ಣ..!!

02 Jan 2019 2:08 PM |
1277 Report

ರಾಜಕೀಯದಲ್ಲಿ ಸಾಕಷ್ಟು ಗೊಂದಲುಗಳು ಕೆಲವೊಮ್ಮೆ ಇರುತ್ತವೆ..ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ಮನ ಬಂದಂತೆ ವರ್ತಿಸುವುದು ಇದೇನು ಹೊಸದೇನಲ್ಲ. ಆದರೆ ಈಗ ತಮ್ಮ ಈ ವರ್ತನೆಯನ್ನು ಮತ್ತೆ ಮುಂದುವರೆಸಿದ್ದಾರೆ.. ಸಿಎಂ ಆದೇಶವನ್ನೂ ಕಡೆಗಣಿಸಿ, ಹೊರಡಿಸಿದ ಆದೇಶವನ್ನು ಇದೀಗ ಎಚ್ ಡಿ ದೇವೆಗೌಡ ತಡೆ ಹಿಡಿದಿದ್ದಾರೆ.

ಎಚ್ ಡಿ ರೇವಣ್ಣ ಪಿಡಿಓ ವರ್ಗಾವಣೆಗೆ ಸಿಎಂ ಕುಮಾರಸ್ವಾಮಿ  ಆದೇಶಕ್ಕೆ ತಡೆ ತಂದು ಸೂಪರ್ ಸಿಎಂ ಎಂಬಂತೆ ವರ್ತನೆಯನ್ನು ಮಾಡಿದ್ದಾರೆ. ನೆಲಮಂಗಲದ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ವಿರುದ್ದ ಕರ್ತವ್ಯಲೋಪ ಹಾಗೂ ಸರ್ವಾಧಿಕಾರಿ ದೋರಣೆ ಆರೋಪ ಹಿನ್ನೆಲೆ ವರ್ಗಾವಣೆ ಮಾಡಿ ಎಂದು ಸಿಎಂ ಕುಮಾರಸ್ವಾಮಿ ಆದೇಶವನ್ನು ವ್ಯಕ್ತ ಪಡಿಸಿದರು... ಪಿಡಿಓ ಮೋಹನ್ ಕುಮಾರ್’ಗೆ ಸೂಪರ್ ಸಿಎಂ ಸಚಿವ ರೇವಣ್ಣ ಶ್ರೀ ರಕ್ಷೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಪಿಡಿಓ ವರ್ಗಾವಣೆ ಆದೇಶ ತಡೆ ಹಿಡಿದಿದ್ದಾರೆ ಎನ್ನಲಾಗುತ್ತದೆ.

Edited By

hdk fans

Reported By

hdk fans

Comments