ಘನತ್ಯಾಜ್ಯ ನಿರ್ವಹಣೆ ಅರಿವಿಗಾಗಿ ಜಾಥಾ ಕಾರ್ಯಕ್ರಮ

28 Dec 2018 4:33 PM |
364 Report

ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಜಾಥಾ ಕಾರ್ಯಕ್ರಮವನ್ನು ನಗರಸಭೆ, ಮೈತ್ರಿ ಸರ್ವ ಸೇವಾ ಸಮಿತಿ ಮತ್ತು ಸ್ವಚ್ ಭಾರತ್ ಮಿಷನ್ ವತಿಯಿಂದ ದಿನಾಂಕ 28-12-2018 ರ ಇಂದು ಬೆಳಿಗ್ಗೆ ಹನ್ನೊಂದು ಘಂಟೆಗೆ ಆಯೋಜಿಸಲಾಗಿತ್ತು, ಸ್ವಚ್ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಸ್ವಚತೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕರೂ ಸ್ವಚ್ಚತೆಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿಸಮಿತಿ ಅಧ್ಯಕ್ಷ ಎನ್. ಕೆ.ರಮೇಶ್, ಪೌರಾಯುಕ್ತ ಮಂಜುನಾಥ್, ಸದಸ್ಯರಾದ ಪಿ.ಸಿ.ಲಕ್ಷ್ಮೀನಾರಾಯಣ್ ಮತ್ತು ಮಂಜುಳ, ಮೈತ್ರಿ ಸರ್ವ ಸೇವಾ ಸಮಿತಿಯ ಸಂಯೋಜಕಿ ಕೆ.ಗೌರಮ್ಮ, ಕಸ್ತೂರಿಬಾ ಶಿಶುವಿಹಾರ ಮಹಿಳಾ ಸಮಾಜ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ಶ್ರೀ ಚೌಡೇಶ್ವರಿದೇವಿ ದೇವಾಂಗ ಮಹಿಳಾ ಸಂಘ, ಶ್ರೀ ಗಾಯತ್ರಿದೇವಿ ಮಹಿಳಾ ಟ್ರಸ್ಟ್, ನವೋದಯ ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು, ಜಿ.ಕೆ. ಪ್ರೌಢಶಾಲೆ ಮಕ್ಕಳು ಭಾಗವಹಿಸಿದ್ದರು. ನಗರದಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳನ್ನೂ ಆಹ್ವಾನಿಸಲಾಗಿತ್ತು, ಆದಾರೆ ಜಾಥಾದಲ್ಲಿ ಬೆರಳೆಣಿಕೆಯಷ್ಟು ಸಂಸ್ಥೆಯ ಪದಾಧಿಕಾರಿಗಳು ಮಾತ್ರ ಹಾಜರಿದ್ದರು.

ಮೈತ್ರಿ ಸರ್ವ ಸೇವಾ ಸಮಿತಿಯು ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ ಭಾರತ್ ಮಿಷನ್ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಐ.ಇ.ಸಿ. ಚಟುವಟಿಕೆಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.  ಮೈತ್ರಿ ಸಂಸ್ಥೆಯು ಕಳೆದ ಮೂವತ್ತು ವರ್ಷಗಳಿಂದ ನೀರು, ನೈರ್ಮಲ್ಯ, ಆರೋಗ್ಯ ಮತ್ತು ಶುಚಿತ್ವಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

Edited By

Ramesh

Reported By

Ramesh

Comments