ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ರ ಹೆಚ್.ವಿಶ್ವನಾಥ್ …?

28 Dec 2018 9:59 AM |
1801 Report

ಮುಂಬರುವ ಲೋಕಸಭಾ ಚುನಾವಣೆಗೆ ಈಗಾಗಲೆ ಎಲ್ಲಾ ರೀತಿಯ ಸಿದ್ದತೆಗಳನ್ನು ಎಲ್ಲಾ ಪಕ್ಷದವರು ಮಾಡಿಕೊಳ್ಳುತ್ತಿದ್ದಾರೆ… ಲೋಕಸಭಾ ಚುನಾವಣೆ ತಯಾರಿ ಸಂಬಂಧವಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹುದ್ದೆಯನ್ನು ತ್ಯಜಿಸಲು ಹೆಚ್. ವಿಶ್ವನಾಥ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ ತಯಾರಿ ಹಿನ್ನಲೆಯಲ್ಲಿ  ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ  ಹೆಚ್.ಡಿ .ದೇವೇಗೌಡರು ಜನವರಿ 3 ರಂದು ಪಕ್ಷದ ಕಚೇರಿಯಲ್ಲಿ ಕರೆದಿರವ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖ ಸಭೆ ಬಳಿಕ ದೇವೇಗೌಡರನ್ನು ಭೇಟಿಯಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ವಿಶ್ವನಾಥ್, ದೇವೇಗೌಡರು ಅಪಾರ ನಿರೀಕ್ಷೆ ಹಾಗೂ ವಿಶ್ವಾಸವಿಟ್ಟು ಹುದ್ದೆ ನೀಡಿದ್ದಾರೆ. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಹುದ್ದೆಗೆ ನ್ಯಾಯ ಕೊಡಲು ಆಗುತ್ತಿಲ್ಲ. ಜೊತೆಗೆ ವೈದ್ಯರು ಸಹ ವಿಶ್ರಾಂತಿಗೆ ಸಲಹೆ ನೀಡಿರುವುದರಿಂದ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲು ಮುಂದಾಗಿದ್ದೇನೆ ಎಂದಿದ್ದಾರೆ.

Edited By

hdk fans

Reported By

hdk fans

Comments