ಹಣ ಕೊಡಿ ಎಂದು ಪದೇಪದೇ ಸಿಎಂ ಕುಮಾರಸ್ವಾಮಿ ಬೆನ್ನು ಬಿದ್ದಿರುವ ಆಸಾಮಿ..!! ಅಷ್ಟಕ್ಕೂ ಆತ ಯಾರು ಗೊತ್ತಾ..?

25 Dec 2018 2:43 PM |
2354 Report

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಬಳಿ ಸಾಲ ಕೊಡಿಸುವಂತೆ ಪದೇಪದೇ ಬೆನ್ನು ಬಿದ್ದಿದ್ದ ವ್ಯಕ್ತಿಯೊಬ್ಬನನ್ನು ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರದಲ್ಲಿ ಮುಖ್ಯಮಂತ್ರಿಯವರು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ವಿಜಯಪುರ ಜಿ.ಹಾವಿನಾಳ ಗ್ರಾಮದ ನಿವಾಸಿ ಕಾಶೀನಾಥ್ ಬನಸೋಡೆ ಸಿಎಂಗೆ ಬೆನ್ನಿಗೆ ಬಿದ್ದಿರುವ ವ್ಯಕ್ತಿ ಎಂದು ಹೇಳಲಾಗುತ್ತಿದೆ..

ಈತ ಇದುವರೆಗೆ ಸುಮಾರು 50 ಬಾರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಹಣ ಪಡೆದಿದ್ದ ಎಂದು ಹೇಳಲಾಗಿದ್ದು, ಇಂದು ಸಿಎಂರನ್ನು ಭೇಟಿಯಾದ ಕಾಶೀನಾಥ್, ''ಹಣ ಕೊಡಿ, ಇಲ್ಲಾ ಬ್ಯಾಂಕಿನಿಂದ ಸಾಲ ಕೊಡಿಸಿ'' ಎಂದು ಮನವಿ ಮಾಡಿದ. ಈ ವೇಳೆ ''ಈತ ಕಳ್ಳ ಆಸಾಮಿ, ಇದಕ್ಕೂ ಮೊದಲು 50 ಬಾರಿ ನನ್ನ ಬಳಿ ಬಂದಿದ್ದಾನೆ. ಪ್ರತೀ ಸಾರಿ ಹಣ ಕೊಟ್ಟು ಕಳಿಸಿದ್ದೇನೆ. ಮತ್ತೆ ಈಗ ಬಂದಿದ್ದಾನೆ'' ಎಂದ ಸಿಎಂ ಕುಮಾರಸ್ವಾಮಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Edited By

hdk fans

Reported By

hdk fans

Comments