'ಜೆಡಿಎಸ್' ನಿಂದ ಯಾರಾಗಲಿದ್ದಾರೆ ಸಚಿವರು..! ಸಿಎಂ ಕುಮಾರಸ್ವಾಮಿಯವರು ಇದರ ಬಗ್ಗೆ  ಏನ್ ಹೇಳುದ್ರು..?

22 Dec 2018 2:55 PM |
1370 Report

ತುಂಬಾ ದಿನಗಳಿಂದ ಆಗೆ ಉಳಿದಿದ್ದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ಕೊನೆಗೂ ಇಂದು ಸಂಜೆ ರಾಜಭವನದಲ್ಲಿ ನಡೆಯುತ್ತಿದೆ.  ಕಾಂಗ್ರೆಸ್ ವತಿಯಿಂದ ಎಂಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಇದರ ಮಧ್ಯೆ ಜೆಡಿಎಸ್ ವತಿಯಿಂದ ಇಂದು ಸಚಿವರಾಗಿ ಯಾರೆಲ್ಲಾ ಪ್ರಮಾಣವಚನ ಸ್ವೀಕರಿಸಲಿದ್ದಾರೆಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಅನುಮತಿ ಪಡೆದ ಬಳಿಕ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ನಿಂದ ಯಾರು ಸಚಿವರಾಗಲಿದ್ದಾರೆ ಎಂಬ ಮಾಹಿತಿ ಸಂಜೆ ಹೊರಬೀಳಲಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.

Edited By

hdk fans

Reported By

hdk fans

Comments