ಡಿಸೆಂಬರ್ 16 ಕ್ಕೆ ಬೈಕ್ ರ್ಯಾಲಿ (Bike rally) ಯ ಮೂಲಕ ರಾಜ್ಯಾದ್ಯಂತ ಅಧಿಕೃತವಾಗಿ ಚಾಲನೆಗೊಳ್ಳಲಿದೆ!

15 Dec 2018 4:49 PM |
413 Report

ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಕೂಗನ್ನು ದೇಶದಾದ್ಯಂತ ಸುನಾಮಿ ಅಲೆಯಾಗಿ ಪರಿವರ್ತಿಸುವಲ್ಲಿ ನಾವೀಗ ಶ್ರಮಿಸಬೇಕಿದೆ. ನಮ್ಮ ನಮ್ಮ ಜಿಲ್ಲೆಯಲ್ಲಿ ಈ ಬೈಕ್ ರ‍್ಯಾಲಿ ಎಲ್ಲೆಡೆಗಿಂತಲೂ ಅದ್ದೂರಿಯಾಗಿ ಜರಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.  ಅದ್ದೂರಿ ಎಂದರೆ ವೈಭವವಲ್ಲ ಬದಲಿಗೆ ಹೆಚ್ಚು ತರುಣರ ಸೇರ್ಪಡೆ ಅಷ್ಟೇ.  ಜಿಲ್ಲೆಯೊಂದರಲ್ಲಿ ಕನಿಷ್ಠ 15 ಕಡೆಗಳಲ್ಲಿ ಬೈಕ್ ರ‍್ಯಾಲಿ ನಡೆಯುವಂತಾದರೆ ಚೆನ್ನ.  ಹೀಗಾಗಿ ನಮಗೆ ಪರಿಚಯವಿರುವವರ ಮೂಲಕ ಹಳ್ಳಿ-ಹಳ್ಳಿಗಳಲ್ಲಿ ರ‍್ಯಾಲಿಯಾಗುವಂತೆ ಪ್ರಯತ್ನಿಸೋಣ.  ಒಮ್ಮೆ ರ‍್ಯಾಲಿಯಲ್ಲಿ ಸ್ವಇಚ್ಛೆಯಿಂದ ಭಾಗವಹಿಸುವವ ಚುನಾವಣೆಯವರೆಗೂ ಕೆಲಸ ಮಾಡುತ್ತಾನೆಂಬುದು ನೆನಪಿರಲಿ.

ಬೈಕ್ ರ‍್ಯಾಲಿಗೆ ಇಂತಿಷ್ಟೇ ಬೈಕುಗಳಿರಬೇಕೆಂಬ ನಿಯಮವಿಲ್ಲ.  ಆದರೆ 15 ಕ್ಕೂ ಕಡಿಮೆ ಇದ್ದರೆ ಅದಕ್ಕೆ ಸೌಂದರ್ಯವಿಲ್ಲ! ಇನ್ನು ಹೆಚ್ಚು ಹೆಚ್ಚು ಬೈಕುಗಳನ್ನು ರ‍್ಯಾಲಿಗೆ ಸೇರಿಸುವ ಪ್ರಯತ್ನವಾದರೆ ಒಳಿತೇ. ಬೈಕ್ ರ‍್ಯಾಲಿಗೆ ಮೊದಲೇ ಅನುಮತಿ ಪಡೆದುಕೊಳ್ಳಿ.  ಹಾಗೇನಾದರೂ ಅನುಮತಿ ಖಡಾಖಂಡಿತವಾಗಿ ನಿರಾಕರಿಸಿದರೆ ಎಲ್ಲಾ ಬೈಕುಗಳನ್ನು ಒಂದೆಡೆ ಸೇರಿಸಿ ಅಲ್ಲಿಂದ ವ್ಯವಸ್ಥಿತವಾದ ಪಾದಯಾತ್ರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೊರಟುಬಿಡಿ.  ಅನುಮತಿ ನಿರಾಕರಿಸಿದ ಕಾರಣ ಈ ಸಂಯಮದ ನಡೆ ಎಂದೇ ಮರುದಿನ ಸುದ್ದಿಯಾಗುವಂತೆ ನೋಡಿಕೊಳ್ಳಿ. ನೆನಪಿಡಿ! ನಮ್ಮ ಬೈಕ್ ರ‍್ಯಾಲಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಿಲ್ಲ.  ಹೀಗಾಗಿ ಅನವಶ್ಯಕ ಹಾರ್ನ್ ಬಳಕೆಯನ್ನೆಲ್ಲ ಸಾಧ್ಯವಾದಷ್ಟೂ ಕಡಿತಗೊಳಿಸಲು ಪ್ರಯತ್ನಿಸಿ.

ರ‍್ಯಾಲಿಗೆ 'ಟೀಂ ಮೋದಿ' ಟೀ ಶರ್ಟ್ ಧರಿಸಿದರೆ ಒಳಿತು.  ಹಾಗಂತ ಅದು ಆಗ್ರಹವಲ್ಲ, ನೀವೇ ನಿರ್ಧರಿಸಿದ ಸಮವಸ್ತ್ರವಾದರೂ ಆದೀತು. ಯಾವುದೇ ಪಕ್ಷದ ಧ್ವಜ ಬಳಸದಿರುವುದು ಒಳಿತು. 'ತಿರಂಗಾ' ಸೂಕ್ತ! ಘೋಷಣೆಗಳಲ್ಲಿಯೂ ಇತರೆ ಪಕ್ಷಗಳನ್ನು ಜರಿಯುವ, ವ್ಯಕ್ತಿಗಳನ್ನು ದೂಷಿಸುವ ಸಂಗತಿ ಇಲ್ಲದಂತೆ ನಿಗಾವಹಿಸಿ. ಯಾವ ಕಾರಣಕ್ಕೂ ಗಾಡಿಗೆ ಪೆಟ್ರೋಲ್ ಹಾಕಿಸುವ ಆಮಿಷ ಕೊಡುವಂತಿಲ್ಲ ಮತ್ತು ಹಣ ಸಂಗ್ರಹಿಸಿ ಪೆಟ್ರೋಲು ಹಾಕಿಸುವಂತೆಯೂ ಇಲ್ಲ.  ರ‍್ಯಾಲಿ ಮುಗಿದ ಮೇಲೆ ಎಲ್ಲರೂ ಒಂದೆಡೆ ಸೇರಿ ಯಾರಿಂದಾದರೂ ಮೋದಿಯ ಕುರಿತಂತೆ ಮಾತನಾಡಿಸಿದರೆ ಒಳಿತು.  ಮೋದಿ ಯೋಜನೆಯ ಫಲಾನುಭವಿಗಳನ್ನು ಕರೆತಂದು ಅವರಿಂದ ಅನುಭವ ಹೇಳಿಸಿದರೆ ಹೆಚ್ಚು ಲಾಭವಾದೀತು. ಪ್ರಚಾರ ಈಗಿಂದಲೇ ಆರಂಭವಾಗಲಿ,  ಬೈಕ್ ಕಾರ್‌ಗಳಿಗೆ ಈ ಸ್ಟಿಕರ್ ಹಾಕಿಕೊಳ್ಳೋಣ.  ನಮ್ಮ ರ‍್ಯಾಲಿಯ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳೋಣ.  ಪತ್ರಿಕೆಗಳಲ್ಲಿ ಈ ಕುರಿತಂತೆ ವರದಿಗಳು ನಿರಂತರವಾಗಿ ಬರುವಂತೆ ಪ್ರಯತ್ನಿಸೋಣ. ಡಿಸೆಂಬರ್ 16 ಕ್ಕೆ ಕಾರ್ಯಕ್ರಮದ ಭಾವಚಿತ್ರಗಳನ್ನು ಸಂಬಂಧಪಟ್ಟವರೊಂದಿಗೆ ಆಗಿಂದಾಗ್ಯೆ ಹಂಚಿಕೊಂಡು ನಮ್ಮ ನಿರ್ಧಾರಿತ ಸಂಖ್ಯೆ ಮುಟ್ಟಿರುವ ಕುರಿತಂತೆ ಲೆಕ್ಕ ತಾಳೆ ಹಾಕಲು ಅನುಕೂಲ ಮಾಡಿಕೊಡೋಣ.

*Team Modi* ಜೊತೆ ಕೈ ಜೋಡಿಸಲು ಇಚ್ಛಿಸುವವರು ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಸೇರಿಕೊಳ್ಳಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯವರು ಈ ಕೆಳಗಿನ ನಂಬರ್ ಗೆ ನಿಮ್ಮ ಹೆಸರು ಮತ್ತು ಊರನ್ನು 8951401997 ಸಂಖ್ಯೆಗೆ ವಾಟ್ಸಾಪ್/SMS ಮಾಡಿ ಸದಸ್ಯರಾಗಿ. ವಿಶ್ವಗುರು ಭಾರತದ ಸಿಂಹಾಸನದಲ್ಲಿ ಒಬ್ಬ ವಿಶ್ವನಾಯಕನಿರಬೇಕೆ ಹೊರತು, ಜೋಕರ್ ಗಳು ಹಾಗೂ ದೇಶ ಮಾರುವವರಲ್ಲ. *ಮತ್ತೊಮ್ಮೆ ಮೋದಿ* ಗಾಗಿ *Team Modi* ಯ ಜೊತೆ ಕೈಜೋಡಿಸಿ!!  ವಿಶ್ವನಾಯಕ ಮತ್ತೊಮ್ಮೆ ಭಾರತದ ಗದ್ದುಗೆ ಗೇರಲು ಸ್ವಲ್ಪ ನಮ್ಮ ಸಮಯವನ್ನು ಮೀಸಲಿಡೋಣ.

ಎಲ್ಲರಿಗೂ ಶುಭವಾಗಲಿ. ಮೋದಿ ಮತ್ತೊಮ್ಮೆ ಗದ್ದುಗೆಯೇರಲಿ.

*ವಿಶ್ವಗುರುವಿಗೆ ವಿಶ್ವನಾಯಕ*

*ಟೀಂ ಮೋದಿ*

Edited By

Ramesh

Reported By

Ramesh

Comments