ಬಿಜೆಪಿಗೆ ಶಾಕ್ ಮೇಲೆ ಶಾಕ್ : ಬಿಜೆಪಿಯ ಐವರು ಶಾಸಕರು ಸಿಎಂ ಕುಮಾರಸ್ವಾಮಿ ತೆಕ್ಕೆಯಲ್ಲಿ..!!??

13 Dec 2018 10:27 AM |
14559 Report

ಬಿಜೆಪಿಗೆ ಶಾಕ್ ಮೇಲೆ ಶಾಕ್ ಆದರೂ ಕೂಡ ಬಿಜೆಪಿ ಯಾಕೋ ಬುದ್ದಿ ಕಲಿತಿರೋ ಆಗಿಲ್ಲ…ಅಧಿವೇಶನ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು 'ಆಪರೇಷನ್ ಕಮಲ'ಕ್ಕೊಳಗಾಗಿ ಪಕ್ಷ ತೊರೆಯಲಿದ್ದಾರೆಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವಾದರೂ ಈಗ ಬಿಜೆಪಿ ನಾಯಕರಿಗೇ ಶಾಕ್ ಆಗುವಂತಹ ಸುದ್ದಿ ಬಹಿರಂಗವಾಗಿದೆ.

ಬಿಜೆಪಿಯ ಐವರು ಶಾಸಕರು ಮೈತ್ರಿಕೂಟದ ಸರ್ಕಾರದ ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೇ ನೇರ ಸಂಪರ್ಕದಲ್ಲಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ. ವಿಚಾರ ಬಿಜೆಪಿ ನಾಯಕರ ಗಮನಕ್ಕೂ ಬಂದಿದ್ದು, ಹೀಗಾಗಿ ಐದು ಮಂದಿ ಶಾಸಕರ ಮೇಲೆ ನಿಗಾ ಇಟ್ಟಿದ್ದಾರೆನ್ನಲಾಗಿದೆ. ಸದ್ಯಕ್ಕೆ ಅವರುಗಳು ಪಕ್ಷ ತೊರೆಯುವುದಿಲ್ಲವೆಂದು ಹೇಳಲಾಗುತ್ತಿದ್ದರೂ ರಾಜಕಾರಣದಲ್ಲಿ ಯಾವುದೇ ಬೆಳವಣಿಗೆ ಸಂಭವಿಸಬಹುದೆಂಬ ಕಾರಣಕ್ಕೆ ಬಿಜೆಪಿ ನಾಯಕರು ಮುನ್ನೆಚ್ಚರಿಕೆ ವಹಿಸಿದ್ದಾರೆ.. ದೋಸ್ತಿ ಸರ್ಕಾರವು ಮತ್ತಷ್ಟು ಬಲಶಾಲಿ ಅನ್ನೋದು ತಿಳಿದಿದೆ.

Edited By

hdk fans

Reported By

hdk fans

Comments