ಚಂದ್ರಮೌಳೇಶ್ವರ ಪಾರ್ಕ್, ಕುಡುಕರ ಪಾಲಿನ ಸ್ವರ್ಗ!

13 Dec 2018 10:02 AM |
484 Report

ದೊಡ್ದಬಳ್ಳಾಪುರ ನಗರದ ಹೊರವಲಯ ಹಾಲಿನಡೈರಿ ವೃತ್ತದಿಂದ ಕೂಗಳತೆಯ ದೂರದಲ್ಲಿರುವ ಚಂದ್ರಮೌಳೇಶ್ವರ ಬಡಾವಣೆಯಲ್ಲಿ ಇರುವ ಪಾರ್ಕ್, 12 ವರ್ಷಗಳ ಹಿಂದೆ ನಿರ್ಮಾಣವಾಗಿರೋ ಉದ್ಯಾನ ನಿರ್ವಹಣೆ ಇಲ್ಲದೆ ಮುಳ್ಳು ಗಿಡಗಳ ಪೊದೆಯಂತಾಗಿದೆ. ಉದ್ಯಾನದಲ್ಲಿ ಮಕ್ಕಳು ಆಟವಾಡಲು ಜಾರುಬಂಡಿ ಹಾಗೂ ಉಯ್ಯಾಲೆಯು ತುಕ್ಕು ಹಿಡಿದು ಬಳಕೆಗೆ ಯೋಗ್ಯವಾಗಿಲ್ಲ. ಉದ್ಯಾನವನ ಸಂಪೂರ್ಣವಾಗಿ ಗಿಡಗಂಟಿಗಳಿಂದ ಕೂಡಿದೆ. ಈ ಮುಳ್ಳಿನ ಪೊದೆಗಳೊಳಗೆ ವಿಷಜಂತುಗಳು ಸುಲಭವಾಗಿ ಸೇರಿಕೊಳ್ಳುತ್ತವೆ. ಸುತ್ತಲೂ ಜನವಸತಿ ಪ್ರದೇಶವಿದ್ದು ಮನೆಯ ಆವರಣದೊಳಗೆ ವಿಷಜಂತುಗಳು ಬಂದ ಉದಾರಣೆಗಳು ಇದೆ. ಎತ್ತರವಾಗಿ ಬೆಳೆದಿರುವ ಮುಳ್ಳಿನ ಗಿಡಗಳು ಕುಡುಕರ ಪಾಲಿಗೆ ಮೆಚ್ಚಿನ ತಾಣ, ಮಧ್ಯಾನ್ಹದ ಹೊತ್ತಿನಲ್ಲೇ ಉದ್ಯಾನದೊಳಗೆ ಎಣ್ಣೆ ಪಾರ್ಟಿಗಳನ್ನ ಮಾಡುತ್ತಿರುತ್ತಾರೆ. ಬಡಾವಣೆಯ ನಿವಾಸಿಯ ಹೆಣ್ಣು ಮಕ್ಕಳು ಸಂಜೆಯ ಹೊತ್ತು ವಾಯು ವಿಹಾರಕ್ಕೆಂದು ಉದ್ಯಾನಕ್ಕೆ ಬಂದರೆ ಕುಡುಕರ ಹಾವಳಿ, ಇವರ ಕಾಟಕ್ಕೆ ಬೇಸತ್ತು ಉದ್ಯಾನದತ್ತ ಹೋಗುವುದನ್ನೆ ಬಿಟ್ಟಿದ್ದಾರೆ.

ಬಡಾವಣೆಯ ನಿವಾಸಿಗಳು ಈಗಾಗಲೇ ಹಲವು ಬಾರಿ  ಪೊಲೀಸರಿಗೆ ದೂರು ನೀಡಿದ್ದಾರೆ.  ಅದರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ.  ಇನ್ನೂ  ಪಾರ್ಕ್ ನಿರ್ವಹಣೆ ದೊಡ್ಡಬಳ್ಳಾಪುರ ನಗರಸಭೆ ಅಧೀನದಲ್ಲಿದೆ, ನಗರಸಭೆ ಕೈಗೆ ಪಾರ್ಕ್ ಬಂದು12 ವರ್ಷಗಳೇ ಆದರೂ ಅಧಿಕಾರಿಗಳೇ ಆಗಲಿ ಜನಪ್ರತಿನಿಧಿಗಳೇ ಆಗಲಿ ಪಾರ್ಕ್ ಅಭಿವೃದ್ಧಿ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ.  ಸೂಕ್ತ ನಿರ್ವಹಣೆ ಇಲ್ಲದೆ ಪಾರ್ಕ್ ಒಳಗೆ ಮುಳ್ಳಿನ ಗಿಡಗಂಟೆಗಳೇ ಬೆಳೆದು ನಿಂತಿವೆ, ವಾಕಿಂಗ್ ಪಾತ್ ಕಾಣಿಸದ ರೀತಿಯಲ್ಲಿ ಗಿಡಗಳು ಅವರಿಸಿದೆ, ನಗರಸಭೆಯ ಅಧ್ಯಕ್ಷರನ್ನ ಕೇಳಿದರೆ ಪಾರ್ಕ್ ನಿರ್ವಹಣೆಗೆಂದು 3 ಲಕ್ಷ ಹಣ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಶ್ರಿಘ್ರದಲ್ಲೇ ಪಾರ್ಕ್ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ.  ದೊಡ್ಡಬಳ್ಳಾಪುರ ನಗರಸಭೆಯವರು ಅನುಮತಿ ನೀಡಿದರೆ ನಗರದ ನಮೋ ಸೇನೆ ವತಿಯಿಂದ ಈ ಪಾರ್ಕನ್ನು ಸ್ವಚ್ಚಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲು ತಯಾರಾಗಿದ್ದಾರೆ, ಅನುಮತಿ ನೀಡುವ ಇಚ್ಚೆ ಇದ್ದಲ್ಲಿ ಸಂಪರ್ಕಿಸಿ, ಕೆಂಪೇಗೌಡ-9886685458

Edited By

Ramesh

Reported By

Ramesh

Comments