ರಾಜ್ಯ ಮಟ್ಟದ ದೇವಾಂಗ ನೇಕಾರ ಬೃಹತ್ ಸಮಾವೇಶ-ತರೀಕೆರೆ ೨೦೧೯

12 Dec 2018 2:03 PM |
426 Report

ರಾಜ್ಯ ಮಟ್ಟದ ದೇವಾಂಗ ನೇಕಾರ ಬೃಹತ್ ಸಮಾವೇಶವನ್ನು ತರೀಕೆರೆಯಲ್ಲಿ ಜನವರಿ ೨೦೧೯ ರಂದು ಆಯೋಜಿಸುವುದರ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಸಮಾಜ ಬಂದುಗಳನ್ನು ಭೇಟಿ ಮಾಡಿ ಸಮಾವೇಶ ಕುರಿತು ಮಾಹಿತಿ ನೀಡಿ ಸಲಹೆ ಸಹಕಾರ ನೀಡುವಂತೆ ಕೋರಲು ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಕರ್ನಾಟಕ ರಾಜ್ಯ ದೇವಾಂಗ ಸಂಘ ಅಧ್ಯಕ್ಷ ಡಾ.ಜಿ. ರಮೇಶ್, ಕಾರ್ಯದರ್ಶಿ ಪ್ರೋ. ಧನಪಾಲ್, ಸಂಘಟನ ಕಾರ್ಯದರ್ಶಿ ಶ್ರೀಮತಿ ವತ್ಸಲ ಜಗನ್ನಾಥ, ನೇಕಾರ ವಾಣಿ ಪತ್ರಿಕೆ ಸಂಪಾದಕ ಲಿಂಗರಾಜು ನೊಣವಿನಕೆರೆ, ಸಮಾವೇಶ ಸಮಿತಿಯ ಯಶವಂತ್ ಟಿ.ಹೆಚ್. ಶ್ರೀಧರ್ ತರೀಕೆರೆ ಹಾಜರಿದ್ದು ನೇಕಾರ ಬಂಧುಗಳನ್ನು ಸಮಾವೇಶಕ್ಕೆ ಆಹ್ವಾನಿಸಿದರು

ತೆಲುಗು ದೇವಾಂಗ ಸಂಘದ ಅಧ್ಯಕ್ಷ ಶ್ರೀಯುತ ಕೃಷ್ಣಮೂರ್ತಿ, ಕಾರ್ಯದರ್ಶಿ ಶಿವಶಂಕರ ಮತ್ತು ಪಧಾದಿಕಾರಿಗಳು, ದೇವಾಂಗ ಮಂಡಳಿಯ ಹಂಗಾಮಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಚಿಕ್ಕಣ್ಣ, ಕಾರ್ಯದರ್ಶಿ ಎ.ಎಸ್.ಕೇಶವ, ಸಹಕಾರ್ಯದರ್ಶಿ ನಟರಾಜ್, ನಿರ್ದೇಶಕಾರಾದ ಅಖಿಲೇಶ್, ರಘು, ಜನಾರ್ಧನ್, ಶಿವರಾಂ, ಶೀಲ, ಶ್ರೀದೇವಿ, ನಿರ್ಮಲ, ಪ್ರಭಾಕರ್, ತೆಲುಗು ದೇವಾಂಗ ಸಂಕ್ಷೇಪ ಸಂಘದ ಗೌರವ ಆಧ್ಯಕ್ಷ ಡಿ.ಕೆ. ವೆಂಕಟಪ್ಪ, ಕಾರ್ಯದರ್ಶಿ ಶ್ರೀನಾಥ್ ಮತ್ತು  ಪಧಾದಿಕಾರಿಗಳಾದ ಬಲರಾಜು, ಶ್ರೀರಾಮುಲು,ನಂಜುಂಡೇಶ್ವರ್, ಸದಾಶಿವು,  ದೊಡ್ಡಬಳ್ಳಾಪುರ ನಗರದ ವಾಣಿಜ್ಯೋದ್ಯಮಿಗಳಾದ ಹೆಚ್.ಪಿ.ಶಂಕರ್, ವಿ.ಆದಿನಾರಾಯಣ್, ದೇವಾಂಗ ಮಂಡಳಿ ಮಾಜಿ ಆಧ್ಯಕ್ಷ ತಿಮ್ಮಶೆಟ್ಟಪ್ಪ ಮತ್ತು ಎಸ್.ಎ.ನಾಗರಾಜ, ಕಂತಳ್ಳಿ ಸದಾನಂದ, ಪತ್ರಕರ್ತ ಕೆ.ಆರ್.ರವಿಕಿರಣ್, ಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ  ಪಿ.ಸಿ.ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಎ.ಕೆ. ರಮೇಶ್, ಖಜಾಂಚಿ ದೇರಾ ನರಸಿಂಹಮೂರ್ತಿ, ಟ್ರಸ್ಟೀಗಳಾದ ಕೆ.ಎಂ.ಕೃಷ್ಣಮೂರ್ತಿ, ಕೆ.ವಿ.ಸುಧಾಕರ್, ಎಸ್.ಶಿವಾನಂದ್, ಆರ್.ನಾರಾಯಣಪ್ಪ, ಹೆಚ್.ಎಸ್.ಶಿವಶಂಕರ್, ಹಾಗೂ ಉಮಾಶಂಕರ್, ಮಹೇಶ, ಎ.ಜಿ.ಕೆ.ಗೋಪಾಲ, ಕೆ.ವಿ.ಸಚ್ಚಿದಾನಂದ, ಶ್ರೀಮತಿ ಗಿರಿಜಾ ರವರುಗಳನ್ನು ಭೇಟಿಮಾಡಿ ಸಮಾವೇಶಕ್ಕೆ ಆಹ್ವಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ವಿದ್ಯಾನಿಧಿಗೆ ಒಂದು ಲಕ್ಷ ರೂ. ದೇಣಿಗೆ ನೀಡಿದ ಹೆಚ್.ಪಿ.ಶಂಕರ್ ರವರನ್ನು ರಾಜ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ದೊಡ್ಡಬಳ್ಳಾಪುರ ನಗರದ ನೇಕಾರ ಸಮಾಜದ ಬಂದುಗಳು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ  ನೆಡಯುತ್ತಿರುವ ರಾಜ್ಯ ಮಟ್ಟದ ದೇವಾಂಗ ನೇಕಾರ ಬೃಹತ್  ಸಮಾವೇಶಕ್ಕೆ ತುಂಬು ಹೃದಯದಿಂದ ತನು ಮನದೊಂದಿಗೆ ಆರ್ಥಿಕ ಸಹಾಯ ನೀಡಿ ಸಮಾವೇಶ ಯಶಸ್ವಿಯಾಗಲಿ ಎಂದು ಕೋರಿ, ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಲು ಸಹಕಾರ ನೀಡುತ್ತವೆ ಎಂದು ತಿಳಿಸಿದರು.

Edited By

Ramesh

Reported By

Ramesh

Comments