ಪಶ್ಚಿಮಾಭಿಮುಖಿ ವರಸಿದ್ಧಿ ವಿನಾಯಸ್ವಾಮಿ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

04 Dec 2018 9:05 AM |
749 Report

ನಗರದ ಹೊರವಲಯ ಪಾಲನಜೋಗಿಹಳ್ಳಿಯ ಜೆ.ಪಿ.ನಗರದಲ್ಲಿರುವ ಪಶ್ಚಿಮಾಭಿಮುಖಿ ವರಸಿದ್ಧಿ ವಿನಾಯಸ್ವಾಮಿ ದೇವಸ್ಥಾನದಲ್ಲಿ ಸಂಜೆ ಆರು ಘಂಟೆಗೆ ಕಡೆಯ ಕಾರ್ತೀಕ ಸೋಮವಾರದ ಪ್ರಯುಕ್ತ ನಾಲ್ಕನೇ ಲಕ್ಷ ದೀಪೋತ್ಸವವನ್ನು ಶ್ರೀ ವರಸಿದ್ಧಿ ವಿನಾಯಕಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿತ್ತು, ಪುಷ್ಪಾಂಡಜ ಮರ್ಹರ್ಷಿ ಆಶ್ರಮ, ತಪಸಿಹಳ್ಳಿಯ ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು ವಿನಾಯಕಸ್ವಾಮಿಗೆ ಪೂಜೆ ಸಲ್ಲಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು, ವಿನಾಯಕಸ್ವಾಮಿ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಪಂಚಾಯತಿ ಸದಸ್ಯೆ ಪದ್ಮಾವತಿ ಮುನೇಗೌಡ, ಶಾಸಕ ಟಿ.ವೆಂಕಟರಮಣಯ್ಯ ಲಕ್ಷದೀಪೋತ್ಸವಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಕಾರ್ಯಕ್ರಮದ ಅಂಗವಾಗಿ ಪೂನಂಪಲ್ಲಿ ಶ್ರೀನಿವಾಸ್ ಮತ್ತು ತಂಡದವರಿಂದ ಹಾಡುಗಾರಿಕೆ ಏರ್ಪಡಿಸಲಾಗಿತ್ತು, ಪಶ್ಚಿಮಾಭಿಮುಖಿಯಾಗಿರುವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯವರಿಗೆ ಮಣಿ ಮತ್ತು ಡ್ರೈಫ್ರೂಟ್ಸ್ ಅಲಂಕಾರ, ನೂರ ಎಂಟು ಲಿಂಗದಿಂದ ಕೂಡಿದ ಶಿವಲಿಂಗಕ್ಕೆ ರುದ್ರಾಭಿಷೇಕ ನೆಡೆಸಿ ವಿಷೇಶ ಅಲಂಕಾರ ಹಾಗೂ ಪಾರ್ವತೀ ಸಮೇತ ಸುಬ್ರಮಣ್ಯಸ್ವಾಮಿಯವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.  ಕಾರ್ಯಕ್ರಮದಲ್ಲಿ ಶ್ರೀ ವರಸಿದ್ಧಿ ವಿನಾಯಕಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎಲ್. ಕೃಷ್ಣಮೂರ್ತಿ, ಉಪಾಧ್ಯಕ್ಷ ಪ್ರಕಾಶಕುಮಾರ್, ಕಾರ್ಯದರ್ಶಿ ಕೆ.ನಟರಾಜ್, ಖಜಾಂಚಿ ಎಸ್.ಡಿ. ರಂಗಸ್ವಾಮಿ, ಟ್ರಸ್ಟಿಗಳಾದ ಎನ್.ಎಸ್.ಗುರುರಾಜು[ರವಿ] ಜಿ.ವಿ.ಚಂದ್ರಶೇಕರ್, ಗಂಗಾಧರ್, ಪುಟ್ಟಲಿಂಗಯ್ಯ ಮತ್ತಿತರರು ಹಾಜರಿದ್ದರು, ಸಂಜೆ ಪಾಲನಜೋಗಳ್ಳಿಯ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ ದೀಪ ಬೆಳಗಿಸಿ ಸ್ವಾಮಿಯ ದರ್ಶನ ಪಡೆದರು.

Edited By

Ramesh

Reported By

Ramesh

Comments