ಕಡೆಯ ಕಾರ್ತೀಕ ಸೋಮವಾರದ ಪ್ರಯುಕ್ತ ಶ್ರೀ ಪ್ರಸನ್ನ ಚಂದ್ರಮೌಳೀಶ್ವರಸ್ವಾಮಿ[ಅರುಣಾಚಲೇಶ್ವರ] ಬ್ರಹ್ಮರಥೋತ್ಸವ

30 Nov 2018 1:14 PM |
520 Report

ದಿನಾಂಕ 3-12-2018 ಕಡೆಯ ಸೋಮವಾರದ ಪ್ರಯುಕ್ತ ದೊಡ್ಡಬಳ್ಳಾಪುರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಷೇಶ ಪೂಜೆಗಳನ್ನು ಏರ್ಪಡಿಸಲಾಗಿದೆ, ಊರಿನ ತೇರಿನ ಬೀದಿಯಲ್ಲಿರುವ ಶ್ರೀ ಪ್ರಸನ್ನ ಚಂದ್ರಮೌಳೀಶ್ವರಸ್ವಾಮಿ[ಅರುಣಾಚಲೇಶ್ವರ] ಯವರ ರಥೋತ್ಸವದ ಅಂಗವಾಗಿ ದಿನಾಂಕ 1-12-2018 ಶನಿವಾರದಂದು ಗಿರಿಜಾ ಕಲ್ಯಾಣೋತ್ಸವ, 3-12-2018 ರಂದು ಬ್ರಹ್ಮರಥೋತ್ಸವವು ಸೋಮವಾರ ಮಧ್ಯಾನ್ಹ 1 ರಿಂದ 12 ಘಂಟೆಯೊಳಗೆ ನಡೆಯುವುದು. 4-12-2018 ಮಂಗಳವಾರ ಹಗಲುಪರಿಷೆ ನಡೆಯಲಿದೆ.

ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಬಸವಣ್ಣ ಸೇವಾ ಸಮಿತಿಯ ವತಿಯಿಂದ 30 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ  ಎಲ್ಲಾ ದೇವರುಗಳಿಗೆ ವಿವಿಧ ಅಲಂಕಾರಗಳನ್ನು ಮಾಡಿ ವಿಷೇಶ ಪೂಜೆ ಏರ್ಪಡಿಸಲಾಗಿದೆ.  ನಗರದ ಮುಖ್ಯರಸ್ತೆಯಲ್ಲಿರುವ ಶ್ರೀ ನಗರೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಂಜೆ 6 ಆರು ಘಂಟೆಗೆ ಲಕ್ಷ ದೀಪೋತ್ಸವವನ್ನು ಶ್ರೀ ನಗರೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ.

ನಗರದ ಹೊರವಲಯ ಪಾಲನಜೋಗಿಹಳ್ಳಿಯ ಜೆ.ಪಿ.ನಗರದಲ್ಲಿರುವ ಪಶ್ಚಿಮಾಭಿಮುಖ ವರಸಿದ್ಧಿ ವಿನಾಯಸ್ವಾಮಿ ದೇವಸ್ಥಾನದಲ್ಲಿ ಸಂಜೆ 5 ಘಂಟೆಗೆ ಲಕ್ಷ ದೀಪೋತ್ಸವವನ್ನು ಶ್ರೀ ವರಸಿದ್ಧಿ ವಿನಾಯಕಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ, ದೀಪೋತ್ಸವಕ್ಕೆ ಚಾಲನೆ ನೀಡುವವರು ಪುಷ್ಪಾಂಡಜ ಮರ್ಹರ್ಷಿ ಆಶ್ರಮ, ತಪಸಿಹಳ್ಳಿ, ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು.

Edited By

Ramesh

Reported By

Ramesh

Comments