ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ...೨೦೧೮

19 Nov 2018 10:12 AM |
283 Report

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಇವರ ವತಿಯಿಂದ ದಿನಾಂಕ ೨೦-೧೧-೨೦೧೮ ರಿಂದ ೦೧-೧೨-೨೦೧೮ ರವರೆಗೆ ತಾಲ್ಲೂಕಿನ ವಿವಿಧ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಮಾಸಾಚರಣೆ ಅಂಗವಾಗಿ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ...೨೦೧೮ ಆಯೋಜಿಸಲಾಗಿದೆ. ದಿನಾಂಕ ೨೧-೧೧-೨೦೧೮ ಮಂಗಳವಾರ ಮಧ್ಯಾನ್ಹ ೧ ಘಂಟೆಗೆ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಉದ್ಘಾಟನೆಯನ್ನು ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್ ಮಾಡಲಿದ್ದಾರೆ, ಕಾರ್ಯಕ್ರಮದ ಆಶಯ ನುಡಿಗಳನ್ನು ಕ.ಜಾ.ಪ. ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದ್ದಾರೆ, ಭಾಷೆ,ಭಾವನೆ,ಭವಿಷ್ಯ ಕುರಿತ ಉಪನ್ಯಾಸವನ್ನು ಎಸ್.ಡಿ.ಯೂ.ಐ.ಎಂ. ಪ್ರಾಂಶುಪಾಲ ಕೆ.ಆರ್.ರವಿಕಿರಣ್ ನೀಡಲಿದ್ದಾರೆ. ರುಮಾಲೆ ನಾಗರಾಜ್, ಡಿ.ವಿ.ಅಶ್ವಥ್ಥಪ್ಪ, ಶ್ರೀಮತಿ ಸುಲೋಚನಮ್ಮ ವೆಂಕಟರೆಡ್ಡಿ, ಡಿ.ಶ್ರೀಕಾಂತ್, ಎನ್.ಎಂ.ನಟರಾಜ್, ಶ್ರೀಮತಿ ಪ್ರಮೀಳ ಮಹದೇವ್, ಶ್ರೀನಿವಾಸ್ ತರಿದಾಳ್ ಗೌರವ ಉಪಸ್ಥಿತಿಯಲ್ಲಿ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಕೆ.ಬಾಲಕೃಷ್ಣ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ವಾರದ ಕಾರ್ಯಕ್ರಮಗಳ ವಿವರ...೨೨-೧೧-೨೦೧೮ ಗುರುವಾರ ಮಧ್ಯಾನ್ಹ ೧ ಘಂಟೆಗೆ ಅರವಿಂದ ಪ್ರೌಢಶಾಲೆ, ಆರೂಡಿ. ದಿನಾಂಕ ೨೩-೧೧-೨೦೧೮ ಶುಕ್ರವಾರ ಬೆಳಿಗ್ಗೆ ೧೦ ಘಂಟೆಗೆ ಲಾವಣ್ಯ ವಿದ್ಯಾ ಸಂಸ್ಥೆ, ದೊಡ್ಡಬಳ್ಳಾಪುರ, ದಿನಾಂಕ ೨೭-೧೧-೨೦೧೮ ಮಂಗಳವಾರ ಮದ್ಯಾನ್ಹ ೧ ಘಂಟೆಗೆ ಮಾರುತಿ ಪ್ರೌಢಶಾಲೆ, ರಾಜಘಟ್ಟ, ದಿನಾಂಕ ೨೮-೧೧-೨೦೧೮ ಬುಧವಾರ ಮಧ್ಯಾನ್ಹ ೧ ಘಂಟೆಗೆ ಸರಸ್ವತಿ ಪ್ರೌಢಶಾಲೆ, ದೇವರಾಜನಗರ, ದೊಡ್ಡಬಳ್ಳಾಪುರ. ದಿನಾಂಕ ೨೯-೧೧-೨೦೧೮  ಗುರುವಾರ ಮಧ್ಯಾನ್ಹ ಸರ್ಕಾರಿ ಪ್ರೌಢಶಾಲೆ, ಅರಳು ಮಲ್ಲಿಗೆ ಬಾಗಿಲು,ದೊಡ್ದಬಳ್ಳಾಪುರ,  ಸಮಾರೋಪ ಸಮಾರಂಭ ದಿನಾಂಕ ೦೧-೧೨-೨೦೧೮ ಶನಿವಾರ ಬೆಳಿಗ್ಗೆ ೧೦ ಘಂಟೆಗೆ ಸರ್ಕಾರಿ ಪ್ರೌಢಶಾಲೆ, ಬಾಶೆಟ್ಟಿಹಳ್ಳಿ ಯಲ್ಲಿ ನಡೆಯಲಿದೆ.

Edited By

Ramesh

Reported By

Ramesh

Comments