ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ... ಸುಚೇತನ ಸಂಸ್ಥೆಯ ಪರಿಸರ ಪ್ರೀತಿಗೆ ಅಭಿನಂದನೆ!

18 Nov 2018 6:48 PM |
286 Report

ಇಂದು ನಗರದ ಹೊರ ವಲಯದ ಸ್ಕೌಟ್ ಕ್ಯಾಂಪ್ ರಸ್ತೆಯ ಎಂ.ಎ.ಪ್ರಕಾಶ ಬಡಾವಣೆಯ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಕನ್ನಡ ರಾಜ್ಯೋತ್ಸವ ಆಚರಿಸುವುದರೊಂದಿಗೆ ಅಧಿಕೃತವಾಗಿ ಉದ್ಘಾಟನೆಗೊಂಡ "ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ(ರಿ) ದೊಡ್ಡಬಳ್ಳಾಪುರ" ದ ಉದ್ಘಾಟನೆಯನ್ನು ಶಾಸಕ ಟಿ.ವೆಂಕಟರಮಣಯ್ಯ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್, ಕ.ಸಾ.ಪ ಅಧ್ಯಕ್ಷೆ ಪ್ರಮೀಳಾ ಮಹದೇವ್, ನಗರಸಭಾ ಸದಸ್ಯರಾದ ಮುದ್ದಪ್ಪ, ಮಲ್ಲೇಶ್, ಕನ್ನಡ ಪಕ್ಷಾಧ್ಯಕ್ಷ ಸಂಜೀವನಾಯ್ಕ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ಮಂಜುನಾಥ್ ರೆಡ್ಡಿ ವಹಿಸಿದ್ದರು, ಶಾಸಕ ವೆಂಕಟರಮಣಯ್ಯ ಮಾತನಾಡಿ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘವು ನಗರದ ಮುತ್ತೂರು ಕೆರೆ ಅಭಿವೃದ್ದಿಯಲ್ಲಿ ಕೈ ಜೋಡಿಸಿರುವುದಕ್ಕೆ ಅಭಿನಂದಿಸಿದರು, ನಂತರ ನಡೆದ ಕಾರ್ಯಕ್ರಮದಲ್ಲಿ ಸುಚೇತನಾ ಟ್ರಸ್ಟ್ ಛೇರ್ಮನ್ ಮಂಜುನಾಥ್ ಮತ್ತು ಅಧ್ಯಕ್ಷ ಸುನಿಲ್ ಮತ್ತು ಪರಿಸರವಾದಿ ಗುರುದೇವ್ ರವರಿಗೆ "ಪರಿಸರ ಶ್ರೀ ದೊಡ್ಡಬಳ್ಳಾಪುರ" ಪ್ರಶಸ್ತಿ ನೀಡಿ ಸನ್ಮಾನ ಮಾಡಿದರು.

ನಗರದಲ್ಲಿರುವ ಸುಚೇತನ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್(ರಿ) ದೊಡ್ಡಬಳ್ಳಾಪುರ.  ಇದರ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಒಂದೇ ವಯೋಮಾನದ ಉತ್ಸಾಹಿ ಯುವಕರ, ಈ ಮುಂಚೆ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದು ಇತ್ತೀಚೆಗಷ್ಟೆ ತಮ್ಮದೇ ಆದ ತಂಡ ಕಟ್ಟಿಕೊಂಡು ನಗರದ ಪರಿಸರ, ಸ್ವಚ್ಛತೆ, ವಿದ್ಯಾಭ್ಯಾಸ, ಕರೆಗಳ ಸಂರಕ್ಷಣೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಕಾರ್ಯವನ್ನು ಮೆಚ್ಚಿ ಇಂದು ಅಭಿನಂದನೆ ಸಲ್ಲಿಸಲಾಯಿತು, ಕಾರ್ಯಕ್ರಮದಲ್ಲಿ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಮತ್ತು ಸುಚೇತನ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.

Edited By

Ramesh

Reported By

Ramesh

Comments