ಮದ್ಯವರ್ತಿ ವ್ಯಾಪಾರಸ್ಥರಿಂದ ನೇಕಾರರ ನಿರಂತರ ಶೋಷಣೆ...ಹೇಮಂತರಾಜು

13 Nov 2018 8:37 AM |
146 Report

ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಡಿ.ಪಿ.ವಿ. ಕನ್ವೆಷನ್ ಹಾಲ್ ನಲ್ಲಿ ನೇಕಾರರ 3ನೇ ಸಂಘಟನಾ ಸಮಾವೇಶವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ವಹಿಸಿದ್ದರು. ತಮ್ಮ ಅಧ್ಯಕ್ಷ ಬಾಷಣದಲ್ಲಿ ಹೇಮಂತರಾಜು ಮಾತನಾಡುತ್ತಾ, ಸಣ್ಣ ಮತ್ತು ಮದ್ಯಮ ವರ್ಗದ ನೇಕಾರರು ಮದ್ಯವರ್ತಿಗಳ ಹತ್ತಿರ ವ್ಯಾಪಾರ ವಹಿವಾಟು ಮಾಡುತ್ತಾರೆ, ಇವರುಗಳು ಸಂದರ್ಭಕ್ಕೆ ತಕ್ಕಂತೆ ಬೆಲೆಗಳನ್ನು ನಿಗದಿ ಪಡಿಸುತ್ತಾರೆ, ಇವರ ಲಾಭದ ಆಸೆಗೆ ನೇಕಾರರು ನಿರಂತ ಶೋಷಣೆಗೆ ಒಳಗಾಗುತ್ತಿದ್ದಾರೆ, ಒಂದು ಕಡೆ ವ್ಯಾಪಾರಸ್ಥರ ಶೋಷಣೆ, ಇನ್ನೊಂದುಕಡೆ ನೇಯ್ಗೆ ಉದ್ಯಮದ ಮೇಲೆ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಈ ಉದ್ಯಮವು ನಶಿಸಿ ಹೋಗುತ್ತಿದೆ, ಶೋಷಣೆಗೆ ಒಳಗಾಗುತ್ತಿರುವ ನೇಕಾರರ ದ್ವನಿಯಾಗಲು ಈ ನೇಕಾರರ ಹೋರಾಟ ಸಮಿತಿಯನ್ನು ಕಟ್ಟಿರುವುದಾಗಿ ಹೇಳಿದರು.

ನೇಕಾರರು ಎದುರಿಸುತ್ತಿರುವ ಸಮಸ್ಯೆಗಳಾದ ಸಾಲಮನ್ನಾ, ತಂತಜ್ಞಾನ ಉನ್ನತೀಕರಣ, ಜಿ.ಎಸ್.ಟಿ. ಇಂದ ಆಗಿರುವ ತೊಂದರೆಗಳು, ವಿದ್ಯುತ್ ಕಂಪನಿಗಳು ವಿಧಿಸಿರುವ ಹೆಚ್ಚುವರಿ ಭದ್ರತಾ ಠೇವಣಿ, ಫ್ರೀ ಪ್ಯೇಡ್ ವಿದ್ಯುತ್ ಸರಬರಾಜು, ಶೇ.1% ಮತ್ತು ಶೇ.3%  ಬಡ್ಡಿ ಸಾಲ ಯೋಜನೆ ಜಾರಿ ಆಗದೇ ಇರುವುದು, ಕಾರ್ಮಿಕರ ವಸತಿ ಸಮಸ್ಯೆಗಳನ್ನು ಚರ್ಚಿಸಲಾಯಿತು.

ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮೀ, ನೇಕಾರ ಮುಖಂಡ ಎಂ.ಜಿ.ಶ್ರೀನಿವಾಸ್, ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಪ್ಪ, ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಯರಾಮು, ಜಿಲ್ಲಾ ನೇಕಾರ ವೇಧಿಕೆ,ಬೆಳಗಾವಿ, ಕಾರ್ಯದರ್ಶಿ ಪರಶುರಾಮ ಹೆಗಡೆ, ವಾಣೀಜ್ಯೋದ್ಯಮಿ ಡಿ.ವಿ ಕೃಷ್ಣಮೂರ್ತಿ, ರಾಜ್ಯ ನೇಕಾರರ ಸಂಘದ ಅಧ್ಯಕ್ಷ ವೈ.ವಿ.ರಾಜು, ಸಿ.ಪಿ.ಎಂ. ಮುಖಂಡ ಆರ್. ಚಂದ್ರತೇಜಸ್ವಿ, ನಗರಸಭಾ ಸದಸ್ಯರಾದ ಪಿ.ಸಿ.ಲಕ್ಷ್ಮೀನಾರಾಯಣ್, ಎ.ಲೋಕೇಶ್ ಬಾಬು, ಯಶೋದಮ್ಮ, ಡಿ.ಎಂ.ಚಂದ್ರಶೇಕರ್ ಮತ್ತು ಕನ್ನಡ ಪಕ್ಷ  ಮುಖಂಡ ಡಿ.ಪಿ. ಆಂಜನೇಯ, ನೇಕಾರರ ಹೋರಾಟ ಸಮಿತಿ, ದೊಡ್ಡಬಳ್ಳಾಪುರದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿಸಮಿತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Edited By

Ramesh

Reported By

Ramesh

Comments