ಟಿಪ್ಪೂ ಜಯಂತಿ ಆಚರಿಸುತ್ತಿರುವುದರ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ

09 Nov 2018 4:45 PM |
408 Report

ರಾಜ್ಯ ಸರ್ಕಾರ ಹಿಂದೂ ವಿರೋಧಿ, ಮತಾಂದ ಟಿಪ್ಪೂ ಜಯಂತಿ ಆಚರಿಸುತ್ತಿರುವುದರ ವಿರುದ್ಧವಾಗಿ ಇಂದು ನಗರದ ತಾಲ್ಲೂಕು ಕಛೇರಿ ವೃತ್ತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು, ಬೆಂ.ಗ್ರಾ.ಜಿಲ್ಲೆ ಬಾಜಪ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ತಾಲ್ಲೂಕು ಕಛೇರಿಗೆ ಆಗಮಿಸಿದ ಪ್ರತಿಭಟನಾ ತಂಡ ಬೆಂ.ಗ್ರಾ.ಜಿಲ್ಲೆ. ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ದೇವನಹಳ್ಳಿಯ ಬಾಜಪ ತಾ.ಅಧ್ಯಕ್ಷ ನಾಗರಾಜ್ ಮಾತನಾಡಿ ಹಿಂದಿನ ಮತ್ತು ಈಗಿನ ಸರ್ಕಾರಗಳು ಬಹುಸಂಖ್ಯಾತ ಹಿಂದೂಗಳು ಧೈರ್ಯವಾಗಿ ನಾವು ಹಿಂದೂ ಅಂತ ಹೇಳಿಕೊಳ್ಳಲು ಹಿಂಜರಿಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲ ಮಾತನಾಡಿ ಈಗಿನ ಸಮ್ಮಿಶ್ರ ಸರ್ಕಾರ ಓಲೈಕೆ ರಾಜಕಾರಣದ ಭಾಗವಾಗಿ ಟಿಪ್ಪೂವಿನ ಕರಾಳ ಮುಖವನ್ನು ಬಚ್ಚಿಟ್ಟು ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಇತಿಹಾಸಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದರು. ರಾಜ್ಯದ ಬಹು ಸಂಖ್ಯಾತರ ಅಪೇಕ್ಷೆಯಂತೆ ಧುರುಳನ ಜಯಂತಿ ಬದಲಾಗಿ ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫರ ಜಯಂತಿ ಆಚರಣೆ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಾಕರರ ಪರವಾಗಿ ಬೆಂ.ಗ್ರಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಬೆಂ.ಗ್ರಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ, ಮಾತನಾಡಿದರು. ಪ್ರತಿಭಟನೆಯಲ್ಲಿ ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಗರ ಅಧ್ಯಕ್ಷ ರಂಗರಾಜು, ನಗರ ಮಹಿಳಾ ಅಧ್ಯಕ್ಷೆ ಗಿರಿಜ, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಖಜಾಂಚಿ ಕಮಲ, ಉಮಾ ಮಹೇಶ್ವರಿ, ವೆಂಕಟೇಶ್ ಬಂತಿ, ರಾಮಕೃಷ್ಣಪ್ಪ, ಸುಬ್ರಮಣ್ಯ, ನಗ್ರಸಭಾ ಸದಸ್ಯ ಕಂಬಿ ನಂಜಪ್ಪ ಮತ್ತಿತರರು ಭಾಗವಹಿಸಿದ್ದರು.  

Edited By

Ramesh

Reported By

Ramesh

Comments