ಯಾಗಗಳು ಮಾಡುವುದು ಹಿಂದೂಗಳ ಸಂಘಟನೆಗಾಗಿ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ

05 Nov 2018 4:33 PM |
1106 Report

2019 ಫೆಬ್ರವರಿ ತಿಂಗಳ ದಿನಾಂಕ 18 ರಿಂದ 24 ರವರೆಗೆ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೇವೂರು, ಉಪ್ಪಳ, ಕಾಸರಗೋಡು ಜಿಲ್ಲೆ, ಇಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ದೊಡ್ಡಬಳ್ಳಾಪುರದ ನಾಗರೀಕರಿಗೆ ಆಹ್ವಾನ ನೀಡಲು ಸಂಜೆ 5 ಕ್ಕೆ ನಗರದ ರಂಗಪ್ಪ ಸರ್ಕಲ್ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಗಮಿಸಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ವಿಶ್ವಜಿತ್ ಅತಿರಾತ್ರ ಮಹಾಸೋಮಯಾಗದ ಬೆಂಗಳೂರು ಸಮಿತಿ ಅಧ್ಯಕ್ಷರಾದ ಡಾ|| ಜಿ.ರಮೇಶ್, ನಿವೃತ್ತ ಡಿಐಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ನಾರಾಯಣ್, ಮಾಲೀಕರು ಸ್ಪಾನ್ ಪ್ರಿಂಟರ್ಸ್, ಸೋಮಯಾಗ ಸಮಿತಿಯ ಬೆಂ.ಕಾರ್ಯದರ್ಶಿ ಕೃಪಾಶಂಕರ್, ದೇವಾಂಗ ಜ್ಯೋತಿ ಪತ್ರಿಕೆ ಸಂಪಾದಕ ಕುದೂರು ರಾಜಶೇಕರ್, ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ ಹಾಗೂ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.

ದೇವರಾಜ ಅರಸ್ ಕಾಲೇಜಿನ ಪ್ರಾಂಶುಪಾಲ ರವಿಕಿರಣ್ ಗಣ್ಯ ಅತಿಥಿಗಳ ಸ್ವಾಗತ ಮಾಡುವುದರ ಮೂಲಕ ಕಾರ್ಯಕ್ರಮ ನಿರೂಪಿಸಿದರು. ಸೋಮಯಾಗದ ಮತ್ತು ಆಶ್ರಮದ ಕುರಿತು ಕೃಪಾಶಂಕರ್ ಪ್ರಾಸ್ಥಾವಿಕ ನುಡಿಗಳನ್ನಾಡಿ ಆಶ್ರಮ ಬೆಳೆದು ಬಂದ ಹಾದಿ ಮತ್ತು ಯಾಗ ಮಾಡುವುದರು ಉದ್ದೇಶ ತಿಳಿಸಿದರು. ನಂತರ ಮಾತನಾಡಿದ ಮಹಾಸೋಮಯಾಗದ ಅಧ್ಯಕ್ಷ ರಮೇಶ್ ಸ್ವಾಮೀಜಿಯವರು ಮಠದಲ್ಲಿ ಮಾಡುತ್ತಿರುವ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಧಾರ ಎಂಬ ಮಹತ್ವಪೂರ್ಣ ಐದು ಯೋಜನೆಗಳ ಮೂಲಕ ಧಾರ್ಮಿಕ,ಆಧ್ಯಾತ್ಮಿಕ, ಸಾಮಾಜಿಕ ಮತ್ತು ಶೈಕ್ಷಣೀಕ ಸೇವೆಗಳನ್ನು ತಿಳಿಸಿದರು. ನಂತರ ಮಾತನಾಡಿದ ಶ್ರೀಗಳು ಆಶೀರ್ವಚನದೊಂದಿಗೆ ಯಾಗ ಮಾಡುವುದರ ಉದ್ದೇಶ ಮತ್ತು ಅದರ ಮಹತ್ವವನ್ನು ಎಳೆ ಎಳೆಯಾಗಿ ನೆರೆದಿದ್ದ ಭಕ್ತರಿಗೆ ತಿಳಿಸಿದರು.

ಅತಿರಾತ್ರ ಸೋಮಯಾಗ...ಯಾಗದಲ್ಲಿ ಸೋಮಲತೆಯನ್ನು ಬಳಸುವುದರಿಂದ ಇದಕ್ಕೆ ಸೋಮಯಾಗ ಎಂದು ಕರೆಯುತ್ತಾರೆ, ಅತಿಯಾದ ರಾತ್ರಿ ಕ್ರಮಿಸುವುದರಿಂದ ಅತಿರಾತ್ರ ಎಂದು ಕರೆಯಲಾಗುತ್ತದೆ.  ಉತ್ತರ ಭಾರತದ ಲಡಾಖ್ ಭೂ ಭಾಗದಲ್ಲಿ ಸೋಮಲತೆಯನ್ನು ಬೆಳೆಯಲಾಗುತ್ತದೆ, ಇದು ಚಂದ್ರನಿಗೆ ಸಂಭಂದಪಟ್ಟ ಗಿಡ, ಹದಿನೈದು ಎಲೆಗಳನ್ನು ಹೊಂದಿರುತ್ತದೆ, ಶುಕ್ಲ ಪಕ್ಷದಲ್ಲಿ ಒಂದೊಂದೇ ಎಲೆ ಹೆಚ್ಚುತ್ತಾ ಹೋಗುತ್ತದೆ, ಕೃಷ್ಣ ಪಕ್ಷದಲ್ಲಿ ಒಂದೊಂದೇ ಎಲೆ ಕಡಿಮೆಯಾಗುತ್ತಾ ಹೋಗುತ್ತದೆ, ಪೌರ್ಣಮಿಗೆ ಹದಿನೈದು ಎಲೆಗಳನ್ನು ಹೊಂದಿ ಅಮಾವಾಸ್ಯೆಗೆ ಒಂದೂ ಎಲೆ ಇಲ್ಲವಾಗುವುದೇ ಈ ಗಿಡದ ವಿಶೇಷ.  ಯಾಗಕ್ಕಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಅಗ್ನಿಹೋತ್ರಿ ದಂಪತಿಗಳನ್ನು ಗುರುತಿಸಲಾಗಿದೆ, ಇವರು ವಂಶ ಪಾರಂಪರ್ಯವಾಗಿ ಕಠಿಣವಾದ ವ್ರತಗಳನ್ನು ಮಾಡಿಕೊಂಡು ಬಂದಿದ್ದಾರೆ, ಯಾಗಶಾಲೆ ಪ್ರವೇಶಿಸುವ ಮೊದಲ ದಿನ ಸಂಪೂರ್ಣವಾಗಿ ಊಟ ಮಾಡಿ ಯಾಗಶಾಲೆಯನ್ನು ಪ್ರವೇಶಿಸುತ್ತಾರೆ, ನಂತರದ ದಿನಗಳಲ್ಲಿ ಕೊಡುವ ಕೇವಲ ಎರಡು ಲೋಟ ಹಾಲಿನೊಂದಿಗೆ ಏಳು ದಿನಗಳನ್ನು ಕಳೆಯುತ್ತಾರೆ, ಯಾಗದ ಕೊನೆಯ ಮೂರು ದಿನಗಳು ದಂಪತಿಗಳು ಸಂಪೂರ್ಣವಾಗಿ ನಿದ್ರೆಯನ್ನು ಮಾಡದೆ ಯಾಗದ ಕಾರ್ಯಗಳನ್ನು ಪೂರೈಸುತ್ತಾರೆ. 2018 ಫೆಬ್ರವರಿ 18 ರಿಂದ ಪ್ರಾರಂಭವಾಗುವ ಅತಿರಾತ್ರ ಸೋಮಯಾಗವು 24 ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದ್ದು, ಕಡೇ ದಿನದಂದು ಯಾಗಕ್ಕೆ ಬಳಸಲ್ಪಟ್ಟಿರುವ ಯಾವುದೇ ವಸ್ತುವನ್ನು ಉಳಿಸಿಕೊಳ್ಳುವಂತಿರದ ಕಾರಣಕ್ಕೆ ಯಾಗ ಮುಗಿದ ಮೇಲೆ ಯಾಗ ಮಂಟಪಕ್ಕೆ ಅಗ್ನಿಸ್ಪರ್ಶ ಮಾಡುವುದರೊಂದಿಗೆ ಈ ಮಹಾಯಾಗವು ಸಮಾಪ್ತಿಯಾಗುತ್ತದೆ ಎಂದು ಪೂಜ್ಯರು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ದೇವಾಂಗ ಸಂಕಣ್ಣನವರ ಸೇವಾ ಟ್ರಸ್ಟ್ ಕಾರ್ಯದರ್ಶಿ ಮತ್ತು ಸದಸ್ಯರು ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿದರು, ಶಾಂತಿನಗರದ ಶ್ರೀ ದಾಸಿಮಯ್ಯ ಮಿತ್ರ ಮಂದಲಿ ಸದಸ್ಯರು, ಶ್ರೀ ಚೌಡೇಶ್ವರಿ ದೇವಾಂಗ ಮಹಿಳಾ ಸಂಘದ ಸದಸ್ಯರು, ಶ್ರೀ ಶಿರಡಿ ಸಾಯಿಬಾಬ ಸೇವಾಶ್ರಮದ ಸದಸ್ಯರು, ಪಿಸಿವಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ದೇವಾಂಗ ಮಂಡಲಿ ನಿರ್ದೇಶಕ ಅಖಿಲೇಶ್, ನಗರಸಭಾ ಸದಸ್ಯ ವಡ್ಡರಹಳ್ಳಿ ರವಿ, ಹೆಚ್.ಎಸ್. ಶಿವಶಂಕರ್, ಬನ್ನಿಮಂಗಲ ಆಂಜನೇಯಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಬೇಗಲಿ ವಿಜಯಕುಮಾರ್, ನಮೋ ಭಾರತ್ ಸಂಸ್ಥಾಪಕ ರವಿ ಮಾವಿನಕುಂಟೆ, ಬಸವರಾಜು, ಸೊಣಪನಹಳ್ಳಿ ರಮೇಶ್, ನಮೋ ಸೇನೆಯ ಸ್ಥಾಪಕ ಬಚ್ಚಳ್ಳಿ ಕೆಂಪೇಗೌಡ, ಬೆಂ.ಗ್ರಾ. ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷ ವತ್ಸಲಾ, ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಕಮಲ, ನಗರ ಬಿಜೆಪಿ ಮಹಿಳಾ ಅಧ್ಯಕ್ಷೆ ಗಿರಿಜ, ಶ್ರೀ ಗಾಯತ್ರಿಪೀಠ ಮಿತ್ರ ಬಳಗದ ಕಾರ್ಯದರ್ಶಿ ರಮೇಶ್, ಖಜಾಂಚಿ ದೇರಾನ, ಶಿವಾನಂದ, ಕೃಷ್ಣಮೂರ್ತಿ, ಸುಧಾಕರ್, ಉಮಾಶಂಕರ್ ಮತ್ತು ಊರಿನ ಭಕ್ತವೃಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕಾರ್ಯಕ್ರಮದ ನಂತರ ಶ್ರೀಗಳು ಮಂತ್ರಾಕ್ಷತೆ ಮತ್ತು ಫಲವನ್ನು ವಿತರಿಸಿದರು.

ಹೆಚ್ಚಿನ ಮಾಹಿತಿಗೆ: ಆರೂಡಿ ರಮೇಶ್-9448242282  ಡಾ.ನಾರಾಯಣ್- 9449169640 ಕೆ.ಎಂ.ಕೃಷ್ಣಮೂರ್ತಿ-9448612253 ಎಸ್.ಶಿವಾನಂದ್-9964280222 ಬಿ.ಎನ್.ಉಮಾಶಂಕರ್-9986029580

Edited By

Ramesh

Reported By

Ramesh

Comments