ನಟಿ ಜಯಮಾಲ ಜೆಡಿಎಸ್’ನ ನಾಯಕನನ್ನು ಹಾಡಿ ಹೊಗಳಿದ್ಯಾಕೆ..? ಇಷ್ಟಕ್ಕೂ ಆ ಜೆಡಿಎಸ್ ನಾಯಕ ಯಾರ್ ಗೊತ್ತಾ..?

ಜೆಡಿಎಸ್ ನಾಯಕರಿಗೆ ಸೋಲೆ ಇಲ್ಲ ಸಾಕಷ್ಟು ಜನ ಮಾತನಾಡಿಕೊಳ್ಳುತ್ತಿದ್ದರು.. ಅದಕ್ಕೆ ನಿದರ್ಶನವಂತೆ ಸಚಿವೆ ಹಾಗೂ ಖ್ಯಾತ ನಟಿ ಡಾ. ಜಯಮಾಲಾ, ಅವರು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಹಾಡಿ ಹೊಗಳಿದ್ದಾರೆ.ಹಾಸನ ಜಿಲ್ಲೆಯ ಶ್ರವಣಬೆಳಗೊಳ ಜೈನಮಠದಲ್ಲಿ ಮಾತನಾಡಿದ ಅವರು, ನೀವು ಇರೋವರೆಗೂ ಸೋಲುವುದೇ ಇಲ್ಲ. ಕೊನೆಯವರೆಗೂ ಶಾಸಕರಾಗಿರುತ್ತೀರಿ ಎಂದು ಹೆಚ್.ಡಿ. ರೇವಣ್ಣರನ್ನು ಗುಣಗಾನ ಮಾಡಿದ್ದಾರೆ. ಹಾಸನದಲ್ಲಿ ಶುಚಿತ್ವಕ್ಕೆ ರೇವಣ್ಣ ಅವರು ನೀಡಿರುವ ಆದ್ಯತೆಯನ್ನು ಎಲ್ಲ ಕಡೆ ಜನರು ಮಾತನಾಡುತ್ತಿದ್ದಾರೆ. ರೇವಣ್ಣ ಅವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಒಂದು ವೇಳೆ ಜನರು ಏನೂ ಕೇಳದೇ ಇದ್ದರೂ ಅವರಿಗೆ ಏನು ಬೇಕು ಎಂಬುದನ್ನು ಅರ್ಥೈಸಿಕೊಂಡು ರೇವಣ್ಣ ಅವರೇ ಒಂದು ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ ಎಂದಿದ್ದಾರೆ.ಹಾಸನ ಜಿಲ್ಲೆ ನೋಡಿದಾಗ ಅವರ ಶ್ರಮದ ದರ್ಶನವಾಗಲಿದೆ. ಯಾವುದೇ ಸರ್ಕಾರವಿರಲಿ, ವಿಧಾನಸೌಧದಲ್ಲಿ ಇಂಥ ಕೆಲಸ ನಮ್ಮ ಜಿಲ್ಲೆಗೆ ಆಗಬೇಕು ಎಂದು ಏಕೆ ಪಟ್ಟು ಹಿಡಿಯುತ್ತಾರೆ ಎಂಬುದು ನನಗೀಗ ಅರ್ಥವಾಗಿದೆ. ಹೀಗಾಗಿ ರೇವಣ್ಣ ಅವರು ಬದುಕಿರುವವರೆಗೂ ಶಾಸಕರಾಗಿರುತ್ತಾರೆ ಎಂದು ಭವಿಷ್ಯ ನುಡಿದರು. ಒಟ್ಟಾರೆ ಜಯಮಾಲ ಅವರು ಜೆಡಿಎಸ್ ಮೇಲೆ ಇಟ್ಟಿರುವ ಈ ಅಭಿಮಾನ ಇದರಲ್ಲೆ ತಿಳಿಯುತ್ತದೆ.
Comments