ಬಿಎಸ್‍ವೈ, ಕುಮಾರ್ ಬಂಗಾರಪ್ಪನವರ ಮಾತಿಗೆ ತಿರುಗೇಟು ಕೊಟ್ಟ ಹೆಚ್.ಡಿ.ರೇವಣ್ಣ

31 Oct 2018 1:28 PM |
281 Report

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಆರೋಪ ಮಾಡಿದ್ದ ಶಾಸಕ ಕುಮಾರ್ ಬಂಗಾರಪ್ಪಗೆ ಸಚಿವ ರೇವಣ್ಣ ಸಖತ್ತಾಗಿಯೇ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ರೇವಣ್ಣನವರು ಕುಮಾರ್ ಬಂಗಾರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈಹೇಳಿಕೆಗೆ ಪ್ರತಿಕ್ರಿಯೆ ಮಾಡುವುದಕ್ಕೆ ಆಗುತ್ತದೆಯೇ ಇಷ್ಟು ಮಾತನಾಡುವ ಯಡಿಯೂರಪ್ಪ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ತನ್ನ ಕಾರ್ಯಕರ್ತರನ್ನ ನಿಲ್ಲಿಸಬಹುದಿತ್ತು ತಾನೇ  ಬಿಎಸ್‍ವೈ ಶ್ರೀರಾಮುಲು ಕಾರ್ಯಕರ್ತರನ್ನ ಯಾಕೆ ನಿಲ್ಲಿಸಲಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.

ಈಗ ಎಲ್ಲಾ ಚುನಾವಣಾ ರಾಜಕೀಯ ಮಾಡುತ್ತಾರೆ. ಅವರು ಹಾಕುವ ಬಾಂಬ್ ಗಳು ನಮಗೆ ಗೊತ್ತಿಲ್ವಾ ಅಂತ ಬಿಎಸ್‍ವೈ ಮತ್ತು ಕುಮಾರ್ ಬಂಗಾರಪ್ಪಗೆ ರೇವಣ್ಣ ಸಖತ್ತಾಗಿಯೇ ಟಾಂಗ್ ನೀಡಿದರು. ರೈತರಿಗೆ ನವೆಂಬರ್ 20ರ ಒಳಗೆ ಋಣಮುಕ್ತ ಪತ್ರಗಳನ್ನು ನೀಡುತ್ತೇವೆ. ಸಹಕಾರಿ ಬ್ಯಾಂಕ್ ಗಳು ಸಹಕಾರ ನೀಡುತ್ತೇವೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲಮನ್ನಾಗೆ ಸ್ಪಂದಿಸದೇ ಇದ್ದರೆ ಏನ್ ಕ್ರಮ ತೆಗೆದುಕೊಳ್ಳಬೇಕು ನಮಗೆ ಚೆನ್ನಾಗಿ ಗೊತ್ತಿದೆ. ಬೇಕೆಂದರೆ ರೈತರ ಅಕೌಂಟ್ ಗೆ ಹಣ ಹಾಕುತ್ತೇವೆ. ರೈತರ ಖಾತೆಗೆ ದುಡ್ಡು ಕಳಿಸಿ ಮನ್ನಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Edited By

hdk fans

Reported By

hdk fans

Comments