ಸದೃಡ ಸಮಾಜಕ್ಕೆ ಆರೋಗ್ಯ ಅತ್ಯಾವಶ್ಯಕ ಡಾ. ಎಂ.ಎಸ್ ಪ್ರಕಾಶ್

27 Oct 2018 4:54 PM |
740 Report

ಕೊರಟಗೆರೆ ಅ. 27:- ಸದೃಡ ಸಮಾಜ ನಿರ್ಮಾಣಕ್ಕೆ ಎಲ್ಲರೂ ಆರೋಗ್ಯವಂತರಾಗಿಬೇಕು ಎಂದು ಬೆಂಗಳೂರಿನ ಅರ್.ವಿ ಡೆಂಡಲ್ ಕಾಲೇಜಿನ ಛೇರ್ಮನ್ ಡಾ. ಎಂ.ಎಸ್ ಪ್ರಕಾಶ್ ತಿಳಿಸಿದರು.        ಪಟ್ಟಣದಲ್ಲಿನ ಮಾರುತಿಕಲ್ಯಾಣ ಮಂಟಪದಲ್ಲಿ  ಶನಿವಾರ ಆರ್.ವಿ ಡೆಂಟಲ್ ಕಾಲೇಜು, ಡಾ. ಬಿ.ಆರ್ ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯ, ಸ್ಫರ್ಶ ಆಸ್ಪತ್ರೆ, ಕ್ಲೌಡ್ ನೈನ್ ಆಸ್ಪತ್ರೆ, ಅಗರ್ ವಾಲ್ ಕಣ್ಣಿನ ಆಸ್ಪತ್ರೆ, ಮಾರುತಿ ಆಸ್ಪತ್ರೆ, ರಿಪಬ್ಲಿಕ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಸಾಪ, ಆರ್ಯವೈಶ್ಯ ಮಂಡಲಿ ಮತ್ತು ಅಂಗಸಂಸ್ಥೆಗಳು ಹಾಗೂ ಪ್ರೆಂಡ್ಸ್ ಗ್ರೂಪ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

         ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ ಈ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮೀಣ ಭಾಗದಲ್ಲಿನ ಜನರಿಗೆ ಆರೋಗ್ಯದ ಬಗ್ಗೆ ಅರಿವನ್ನು ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಶಿಭಿರವನ್ನು ಆಯೋಜಿಸಿರುವುದಾಗಿ ಹೇಳಿದರು.

      ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ಕಲುಷಿತ  ಮತ್ತು ಕಲಬೆರಕೆ ಆಹಾರದಿಂದಲೇ ಬಹುತೇಕ ಕಾಯಿಗಳು ಬರುತ್ತಿದ್ದು ಇದರ ಬಗ್ಗೆ ಎಚ್ಚರಬಹಿಸಬೇಕು    ಆರೋಗ್ಯ ಸರಿಯಾಗಿ ಸಮತೋಲನದಲ್ಲಿದ್ದರೆ ಎಲ್ಲರೂ ಸರಿಯಾಗಿರುತ್ತದೆ ಇಲ್ಲವಾದಲ್ಲಿ ಬದುಕು ದುಸ್ಥರವಾಗಿರುತ್ತದೆ ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ಹರಿಸಬೇಕು. ಬಹುಮುಖ್ಯವಾಗಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಉತ್ತಮ ವಿದ್ಯಾಬ್ಯಾಸಮಾಡಬಹುದು ಎಂದು ಸಲಹೆ ನೀಡಿದರು.

       ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ಚಂದ್ರಶೇಖರ್ ಮಾತನಾಡಿ ಶಿಕ್ಷಣ ಪಡೆಯಲು ಆರೋಗ್ಯ ಅತ್ಯಾವಶ್ಯಕ ತಾಲೂಕಿನಲ್ಲಿ 20 ಸಾವಿರ ವಿದ್ಯಾರ್ಥಿಗಳು ಮತ್ತು ಒಂದು ಸಾವಿರ ಶಿಕ್ಷಕರಿಗೆ ಶಿಭಿರದ ಲಾಭವನ್ನು ಪಡೆಯಲು ತಿಳಿಸಿದ್ದು ಉಚಿತ ಶಿಕ್ಷಣದೊಂದಿಗೆ ಉಚಿತ ಆರೋಗ್ಯ ನೀಡಲಾಗುತ್ತಿದೆ ಎಂದರು.
       ಶಿಭಿರದಲ್ಲಿ ಕಣ್ಣು,ಕಿವಿ,ಮೂಗು, ನಾಲಿಗೆ, ದಂತ, ಮಕ್ಕಳ, ಮಧುಮೇಹ, ಕೀಲು ಮೂಳೆ ಸೇರಿದಂತೆ ಹಲವು ತಜ್ಞ ವೈದ್ಯರ ತಂಡ ಸಾರ್ವಜನಿಕರಿಗೆ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ   ಪ್ರೊ. ಡಾ. ವಿಷ್ಣು ಹಯಗ್ರೀವ್,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುಲೀಕುಂಟೆ ಮಲ್ಲಿಕಾರ್ಜುನ್, ಆರ್ಯವೈಶ್ಯಮಂಡಳಿಯ ಅಧ್ಯಕ್ಷ ವೆಂಕಟೇಶಶೆಟ್ಟಿ, ಕಾರ್ಯಕದರ್ಶಿ ಚಿನ್ನವೆಂಕಟಶೆಟ್ಟಿ, ವಾಸವಿ ಮಹಿಳಾ ಮಂಡಲಿ ಅಧ್ಯಕ್ಷ ಪದ್ಮಾರಮೇಶ್, ಯುವ ಅಧ್ಯಕ್ಷ  ಎಂ.ಜಿ ಬದ್ರಿಪ್ರಸಾದ್, ಕನ್ನಿಕಾ ವಿದ್ಯಾಪೀಠ ಅಧ್ಯಕ್ಷ ಎಂ.ಜಿ ಸುಧೀರ್, ಕಾರ್ಯದರ್ಶಿ ಕೆಎಸ್ ವಿ ರಘು, ಬೆಂಗಳೂರು ರೋಟರಿಯ ರಾಮು, ನಾಟಕ ಅಕಾಡಮಿ ಸದಸ್ಯ ಮೈಲಾರಪ್ಪ, ಪ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಎನ್ ರವಿಕುಮಾರ್, ಮುಖಂಡರಾದ ನಾಗರಾಜು,ದಯಾನಂದ್, ಲೋಕೇಶ್, ಲಕ್ಷ್ಮಿಪುತ್ರ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ) 

      

 

Edited By

Raghavendra D.M

Reported By

Raghavendra D.M

Comments