ನಮ್ಮ ಕಣ್ಣು, ನಮ್ಮ ದೊಡ್ಡಬಳ್ಳಾಪುರ ಉಚಿತ ಕಣ್ಣಿನ ತಪಾಸಣೆ ಇಂದು 22 ನೇ ವಾರ್ಡ್ ಹೇಮಾವತಿಪೇಟೆಯಲ್ಲಿ ಆರಂಭ

23 Oct 2018 3:33 PM |
630 Report

ನಗರದಲ್ಲಿ ಮೊದಲ ಹಂತವಾಗಿ ನಮ್ಮ ಕಣ್ಣು, ನಮ್ಮ ದೊಡ್ಡಬಳ್ಳಾಪುರ ಉಚಿತ ಕಣ್ಣಿನ ತಪಾಸಣೆ ಇಂದು 22 ನೇ ವಾರ್ಡ್ ಹೇಮಾವತಿಪೇಟೆಯಲ್ಲಿ ಆರಂಭವಾಯಿತು, ನಗರಸಭಾ ಸದಸ್ಯ ಎಸ್.ಎ.ಭಾಸ್ಕರ್, ದೃಷ್ಠಿ ಕಣ್ಣಿನ ಆಸ್ಪತ್ರೆಯ ಬಾಲು, ಲೋಕೇಶ್, ಎಸ್ಸಿಲಾರ್ ಕಂಪನಿಯ ನೇತ್ರ ತಪಾಸಣಾ ತಂಡದ ಕಾರ್ಯಕರ್ತರು ಹಾಜರಿದ್ದು ಅಂಗಡಿ ಮತ್ತು ಮನೆಗಳಲ್ಲಿ ಪ್ರತಿಯೊಬ್ಬ ಸದಸ್ಯರ ವಿವರ ಪಡೆದು ತಪಾಸಣೆ ನೆಡೆಸಿ ಸಲಹೆ ಸೂಚನೆ ನೀಡುತ್ತಾ, ಕನ್ನಡಕದ ಅವಶ್ಯಕತೆಯಿರುವವರನ್ನು ಹೆಚ್ಚಿನ ಪರೀಕ್ಷೆಗೆ ದೃಷ್ಠಿ ಕಣ್ಣಿನ ಅಸ್ಪತ್ರೆಗೆ ಕಳುಹಿಸಿದರು. 22 ನೇ ವಾರ್ಡ್ ನಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಉಚಿತ ತಪಾಸಣೆ ನಡೆಯಲಿದೆ, ಇಲ್ಲಿ ವಾಸವಾಗಿರುವ ನಾಗರೀಕರು, ಅಂಗಡಿಗಳನ್ನು ಹೊಂದಿರುವ ವ್ಯಾಪಾರಸ್ಥರೂ ಸೇರಿದಂತೆ ಪ್ರತಿಯೊಬ್ಬರೂ ಉಚಿತವಾಗಿ ತಮ್ಮ ತಮ್ಮ ಮನೆಗಳು/ಅಂಗಡಿ ಯಲ್ಲಿ ಕಣ್ಣುಗಳ ತಪಾಸಣೆ ಮಾಡಿಸಿಕೊಂಡು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ನಗರಸಭಾ ಸದಸ್ಯ ಭಾಸ್ಕರ್ ತಮ್ಮ ವಾರ್ಡಿನ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ

ಮಧ್ಯಾನ್ಹ ಮೂರು ಘಂಟೆಯವರೆಗೆ ಸುಮಾರು ನೂರ ಹತ್ತು ಮಂದಿಗೆ ಕಣ್ಣಿನ ತಪಾಸಣೆ ನಡೆಸಲಾಯಿತು, ಕಣ್ಣಿನ ದೃಷ್ಠಿ ತೊಂದರೆ ಇದ್ದ ಅರವತ್ತೈದು ಮಂದಿಗೆ ಉಚಿತವಾಗಿ ಕನ್ನಡಕ ನೀಡಲಾಯಿತು.  ಈ ಕಾರ್ಯಕ್ಕೆ ನಗರದ ಎಲ್ಲಾ ನಗರಸಭಾ ಸದಸ್ಯರೂ ತಮ್ಮ ಸಹಕಾರ ನೀಡುವಂತೆ ದೃಷ್ಠಿ ಕಣ್ಣಿನ ಆಸ್ಪತ್ರೆಯ ಇನ್ ಚಾರ್ಜ್ ಬಾಲು ಮನವಿ ಮಾಡಿದರು. 

ವಿಶೇಷ ಸೂಚನೆ-ಶಸ್ತ್ರಚಿಕಿತ್ಸೆಗೆ ಒಳಪಡುವ ವ್ಯಕ್ತಿಯು ಇನ್ನೂ ಉತ್ತಮ ಗುಣಮಟ್ಟದ ಲೆನ್ಸ್ ಬೇಕೆಂದು ಇಚ್ಚೆಪಟ್ಟಲ್ಲಿ ಅದಕ್ಕೆ ತಗಲುವ ವೆಚ್ಚ ಕೊಟ್ಟರೆ ಅದನ್ನೇ ಅಳವಡಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಎಸ್.ಎ. ಭಾಸ್ಕರ್, ನಗರಸಭಾ ಸದಸ್ಯ 22 ನೇ ವಾರ್ಡ್, 9242899888

ಲೋಕೇಶ್ [ ದೃಷ್ಠಿ ಕಣ್ಣಿನ ಆಸ್ಪತ್ರೆ ] 9380790890  

Edited By

Ramesh

Reported By

Ramesh

Comments