ರೈತರಿಗೆ ಗುಡ್ ನ್ಯೂಸ್ ಕೊಟ್ಟ ಕುಮಾರಣ್ಣ..! ರೈತರ ಸಾಲ ಮನ್ನಾದಲ್ಲಿ ಮಹತ್ವದ ಬೆಳವಣಿಗೆ..!!

23 Oct 2018 10:51 AM |
342 Report

ರಾಜ್ಯ ಸರ್ಕಾರದಿಂದ ಸಾಲ ಮನ್ನಾ ಕುರಿತು ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದ್ದವು. ಇದೀಗ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ರೈತರ ಸಾಲ ಮನ್ನಾ ತೀರ್ಮಾನಕ್ಕೆ ಹಿಂದೇಟು ಹಾಕಿದ್ದ ವಾಣಿಜ್ಯ ಬ್ಯಾಂಕ್ ಗಳು ಸಾಲ ಪಡೆದ ರೈತರ ಮಾಹಿತಿ ಒದಗಿಸಲು ಇದೀಗ ಮುಂದಾಗಿವೆ.  

15 ವಾಣಿಜ್ಯ ಬ್ಯಾಂಕುಗಳು ಅ. 20 ರವರೆಗೆ ಸರಿ ಸುಮಾರು 10 ಲಕ್ಷ ರೈತರ ಬೆಳೆ ಸಾಲದ ವಿವರ ಒದಗಿಸಿವೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ವಿಚಾರದಲ್ಲಿ ಸೃಷ್ಟಿಯಾಗಿದ್ದ ತೊಡಕು ನಿವಾರಣೆಯಾಗುವ ಎಲ್ಲಾ ಸಾಧ್ಯತೆ ಇದ್ದು. ರೈತರ ಸಾಲ ಮನ್ನಾ ಆಗುವುದು ಬಹುತೇಕ ಖಚಿತವಾಗಿದೆ. ವಾಣಿಜ್ಯ ಬ್ಯಾಂಕುಗಳ ಸಾಲಮನ್ನಾ ಘೋಷಣೆ ಮಾಡಿದ ಬಳಿಕ ಒಟ್ಟು 23.71 ಲಕ್ಷ ಸಾಲದ ಖಾತೆಗಳಲ್ಲಿನ ಒಟ್ಟು 23.71 ಲಕ್ಷ ಸಾಲದ ಖಾತೆಗಳಲ್ಲಿನ ಒಟ್ಟು 22.545 ಕೋಟಿ ರೂ. ಸಾಲದ ವಿವರ ಒದಗಿಸಲು ಸರ್ಕಾರ ಬ್ಯಾಂಕ್ ಗಳಿಗೆ ಸೂಚನೆ ನೀಡಿತ್ತು. ಅಲ್ಲದೇ ಕಂತುಗಳಲ್ಲಿ ಸಾಲಮನ್ನಾ ಹಣವನ್ನು ಮರುಪಾವತಿ ಮಾಡುವುದಾಗಿ ಬ್ಯಾಂಕುಗಳಿಗೆ ಸರ್ಕಾರ ಭರವಸೆ ನೀಡಿತ್ತು.ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Edited By

hdk fans

Reported By

hdk fans

Comments