ನಮ್ಮ ಕಣ್ಣು, ನಮ್ಮ ದೊಡ್ಡಬಳ್ಳಾಪುರ ನಾಳೆ 22ನೇ ವಾರ್ಡ್ ಹೇಮಾವತಿಪೇಟೆಯಲ್ಲಿ ಪ್ರಾರಂಭ

22 Oct 2018 3:41 PM |
1390 Report

ಕರ್ನಾಟಕ ಸರ್ಕಾರ, ದೃಷ್ಠಿ ಕಣ್ಣಿನ ಆಸ್ಪತ್ರೆ ಮತ್ತು ಎಸ್ಸಿಲಾರ್ ಜೊತೆಯಾಗಿ ಆಯೋಜಿಸಿರುವ ನಮ್ಮ ಕಣ್ಣು, ನಮ್ಮ ದೊಡ್ಡಬಳ್ಳಾಪುರ ಉಚಿತ ಕಣ್ಣಿನ ತಪಾಸಣೆ ಮತ್ತು ಅವಶ್ಯಕತೆ ಇರುವವರಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ನಾಳೆಯಿಂದ ನಗರದಲ್ಲಿ ಆರಂಭವಾಗಲಿದೆ, ಭಾರತದಲ್ಲೇ ಪ್ರಥಮವಾಗಿ ದೊಡ್ಡಬಳ್ಳಾಪುರದಲ್ಲಿ ಉದ್ಘಾಟನೆಗೊಂಡು ಮೊದಲ ಹಂತದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರದಲ್ಲಿರುವ ಆರೂಡಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು, ನಾಳೆಯಿಂದ ನಗರದ ಎಲ್ಲಾ ವಾರ್ಡುಗಳಲ್ಲಿ ಹಂತ ಹಂತವಾಗಿ ಪ್ರತೀ ಮನೆಗಳಲ್ಲಿ ತಪಾಸಣೆ ಸಡೆಸಲಾಗುವುದು, ಯಾವುದೇ ವ್ಯಕ್ತಿಗೆ ಕಣ್ಣಿನ ಪೆರಿಜಿಯಂ ಅಥವ ಕ್ಯಾಟರಾಕ್ಟ್ ಆಪರೇಷನ್ ಅವಶ್ಯಕತೆ ಇದ್ದಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನೆಡೆಸಿ ರಾಜ್ಯ ಸರ್ಕಾರದಿಂದ ಕೊಡುವ ಬೇಸಿಕ್/ ನಾರ್ಮಲ್ ಲೆನ್ಸ್ ಅಳವಡಿಸಲಾಗುವುದು.

ನಗರದಲ್ಲಿ ಮೊದಲ ಹಂತವಾಗಿ ನಾಳೆಯಿಂದ 22 ನೇ ವಾರ್ಡ್ ಹೇಮಾವತಿಪೇಟೆಯಲ್ಲಿ ನಗರಸಭಾ ಸದಸ್ಯ ಎಸ್.ಎ.ಭಾಸ್ಕರ್ ಸಹಕಾರದೊಂದಿಗೆ ಪ್ರಾರಂಭವಾಗಲಿದೆ, 22 ನೇ ವಾರ್ಡ್ ನಲ್ಲಿ ವಾಸವಾಗಿರುವ ನಾಗರೀಕರು, ಅಂಗಡಿಗಳನ್ನು ಹೊಂದಿರುವ ವ್ಯಾಪಾರಸ್ಥರೂ ಸೇರಿದಂತೆ ಪ್ರತಿಯೊಬ್ಬರೂ ಉಚಿತವಾಗಿ ತಮ್ಮ ತಮ್ಮ ಮನೆಗಳು/ಅಂಗಡಿ ಯಲ್ಲಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವುದು, ಕನ್ನಡಕದ ಅವಶ್ಯಕತೆಯಿರುವವರಿಗೆ ಸ್ಥಳದಲ್ಲಿಯೇ ಉಚಿತವಾಗಿ ಕನ್ನಡಕಗಳನ್ನು ನೀಡಲಾಗುವುದು. ಈ ಕಾರ್ಯಕ್ಕೆ ನಗರದ ಎಲ್ಲಾ ನಗರಸಭಾ ಸದಸ್ಯರೂ ತಮ್ಮ ಸಹಕಾರ ನೀಡುವಂತೆ ದೃಷ್ಠಿ ಕಣ್ಣಿನ ಆಸ್ಪತ್ರೆಯ ಇನ್ ಚಾರ್ಜ್ ಬಾಲು ಮನವಿ ಮಾಡಿದರು.

ವಿಶೇಷ ಸೂಚನೆ-ಶಸ್ತ್ರಚಿಕಿತ್ಸೆಗೆ ಒಳಪಡುವ ವ್ಯಕ್ತಿಯು ಇನ್ನೂ ಉತ್ತಮ ಗುಣಮಟ್ಟದ ಲೆನ್ಸ್ ಬೇಕೆಂದು ಇಚ್ಚೆಪಟ್ಟಲ್ಲಿ ಅದಕ್ಕೆ ತಗಲುವ ವೆಚ್ಚ ಕೊಟ್ಟರೆ ಅದನ್ನೇ ಅಳವಡಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಎಸ್.ಎ. ಭಾಸ್ಕರ್, ನಗರಸಭಾ ಸದಸ್ಯ 22 ನೇ ವಾರ್ಡ್, 9242899888

ಲೋಕೇಶ್ [ ದೃಷ್ಠಿ ಕಣ್ಣಿನ ಆಸ್ಪತ್ರೆ ] 9380790890  

Edited By

Ramesh

Reported By

Ramesh

Comments