ಎಚ್.ಡಿ.ದೇವೇಗೌಡರು ಮತ್ತೊಮ್ಮೆ ದೇಶದ ಪ್ರಧಾನಿಯಾಗ್ತಾರೆ..!? ಸಿಎಂ HDK ಹೀಗೆ ಹೇಳಿದ್ಯಾಕೆ ಗೊತ್ತಾ..?

18 Oct 2018 10:54 AM |
2312 Report

ಇಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು  ಪ್ರವಾಹ ಸಂತ್ರಸ್ತರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದ್ದ ಸಮಯದಲ್ಲಿ ಸುದ್ದಿಗಾರರು ದೇವೇಗೌಡರು ಪ್ರಧಾನಿ ಆಗುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾದರೂ, ಆಗಬಹುದು ಎಂದು ಉತ್ತರಿಸಿದ್ದಾರೆ.  

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದವರು ಅಧಿಕಾರಕ್ಕೆ ಬರುವ ನಿರೀಕ್ಷೆಯು ಇದೆ. ಅಷ್ಟೆ ಅಲ್ಲದೇ ದೇಶದಲ್ಲಿ ತೃತೀಯ ರಂಗ ಬರುವ ವಾತಾವರಣವು ಕಾಣಿಸುತ್ತಿದೆ. ಹೀಗಾಗಿ ದೇವೇಗೌಡರೂ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ.

Edited By

hdk fans

Reported By

hdk fans

Comments