ಬಂದೆಯಾ ಪುಟ್ಟ ಹೋದೆಯಾ ಪುಟ್ಟ! ರಾಹುಲ್ ಸಾಧಿಸಿದ್ದಾದರೂ ಏನು? ಭಾವನಾತ್ಮಕವಾಗಿ ಮಾತಾಡುವುದರಿಂದ ದೇಶ ಉದ್ಧಾರವಾಗಲ್ಲ!

15 Oct 2018 1:01 PM |
551 Report

ಪುಟ್ಟ ಬಂದ ಹೋದಾ ಹೆಚ್ಎಎಲ್ ಯಾರು ಸ್ಥಾಪಿಸಿದ್ದರೋ ಗೊತ್ತಿಲ್ಲ, ಅವರ ತಾತ ಸ್ಥಾಪಿಸಿದ್ದು ಅನ್ನುವ ಗುಂಗಿನಿಂದ ಹೊರಗಡೆಯೇ ಬಂದಿಲ್ಲ. ಅರ್ಧ ಆಯಸ್ಸು ಕಳೆದಿರೋ ಯುವಕನಿಗೆ ಜ್ಞಾನದಾನ ಮಾಡಲು ಬಂದಿದ್ದು ತಲೆಮಾಸಿದ ಕೆಲವು ನಿವೃತ್ತ ನೌಕರರು! ಹೆಚ್ಚು ಕಡಿಮೆ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳೆಂಬ ಹೆಸರಲ್ಲಿ ಹಾಜರಿ ಪುಸ್ತಕದಲ್ಲಿ ಸಹಿಮಾಡಿ ಕ್ಯಾಂಟೀನು ಮಾರ್ಕೆಟ್, ಬ್ಯಾಂಕ್, ನೌಕರರ ಗೃಹನಿರ್ಮಾಣ ಸಂಘ, ಲೇಔಟ್ ನಿರ್ಮಾಣವೆಂದು ಓಡಾಡಿಕೊಂಡಿರುವ ಸಿರಾಜುದ್ದೀನ್, ಮಾಧವನ್, ಅನಂತಪದ್ಮನಾಭ. ನಿವೃತ್ತಿಯಾದ ತಕ್ಷಣ ಸರಕಾರಕ್ಕೆ ಪಾಠ ಹೇಳುತ್ತಿದ್ದಾರೆ 1940 ರಲ್ಲಿ ಸ್ಥಾಪನೆಯಾದಾಗಿಂದಲೂ ಕಾರ್ಯಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದ ಕಂಪೆನಿಯಾವುದಾದರೂ ಇದ್ದರೆ ಅದು ಹೆಚ್ಎಎಲ್! ಭಾವನಾತ್ಮಕವಾಗಿ ಮಾತಾಡುವುದರಿಂದ ದೇಶ ಉದ್ಧಾರವಾಗಲ್ಲ, ಇವರ ಸಾಮರ್ಥ್ಯ ನೋಡಿಯೇ ದಸಾಲ್ಟ್ ಹೆಚ್ಎಎಲ್ ನ್ನ ಒಪ್ಪಿಕೊಂಡಿಲ್ಲ, ಹೆಚ್ಎಎಲ್ ಏನೂ ಮಾಡಿಲ್ಲವೆಂದು ಯಾರೂ ಹೇಳಲಾಗದು ಅದು ಅಪ್ ಟು ದಿ ಮಾರ್ಕ್ ಅನ್ನುವುದೇ ಅಭಿಪ್ರಾಯ.

ಭಾವನಾತ್ಮಕತೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸಕ್ಕೆ ಬರುವದಿಲ್ಲ!

ಹೆಚ್ಎಎಲ್ ಕಂಪನಿಯ ಜೊತೆಗೆ ರಫೇಲ್ ಯುದ್ಧ ವಿಮಾನ ತಯಾರಿಕೆ ಕಂಪನಿ ಕೈಜೊಡಿಸಲು ಸಿದ್ಧವಿಲ್ಲದಾಗ ಒಂದು ವೇಳೆ ಒಪ್ಪಂದವಾಗಿ ಅನಾಹುತಗಳಾದರೆ ನಾವು ಜವಾಬ್ದಾರಿಯಲ್ಲವೆಂದಾಗ ಹೆಚ್ಎಎಲ್ ಕಂಪನಿಯನ್ನು ಹೊರಗಿಟ್ಟಿದ್ದು ಅಂದಿನ ಯುಪಿಎ ಸರಕಾರ. ಹೆಚ್ಎಎಲ್ ಧ್ರುವ ಹೆಲಿಕಾಪ್ಟರ್ ತಯಾರಿಸಲು 1984 ರಲ್ಲಿ ಯೋಜನೆ ಸಿದ್ಧಗೊಳಿಸಿ 1992 ರಲ್ಲಿ ಟ್ರಯಲ್ ಹಾರಾಟ ಮಾಡಿ ಮುಂದೆ 2002 ರಲ್ಲಿ ದೇಶಸೇವೆಗೆ ಸಿದ್ಧವೆನ್ನುತ್ತಾರೆ! ಮಾರ್ಪಾಡುಗಳೊಂದಿಗೆ IAF ಭಾರತೀಯ ವಾಯುಸೇನೆಗೆ ಹಸ್ತಾಂತರಿಸುತ್ತಾರೆ.  ಒಂದು ಮಾದರಿಯ ಹೆಲಿಕಾಪ್ಟರ್ ಸಿದ್ಧವಾಗಲು 20 ವರ್ಷ ಬೇಕು ಇವತ್ತು ಭಾಷಣ ಮಾಡಿದವರ ಸೇವಾವಧಿ ಒಂದು ಹೆಲಿಕಾಪ್ಟರ್ ಒಂದು ಮಿಗ್ -21 ತಯಾರಿಸುವದರಲ್ಲಿ ಮುಗಿದುಹೋಗಿದೆ!

ಮಿಗ್-21 ಕಥೆಯೇನೂ ಭಿನ್ನವಾಗಿಲ್ಲ 1961 ರಲ್ಲಿ ರಷ್ಯಾ ತಂತ್ರಾಜ್ಞಾನವನ್ನು ಹೆಚ್ಎಎಲ್ ಗೆ ವರ್ಗಾಯಿಸಿದಮೇಲೆ 1965 ರ ಇವುಗಳ ಪಾತ್ರ ಸೀಮಿತ, ಈ ಮಿಗ್-21 ವಿಮಾನವನ್ನು ಹಾರುವಶವಪೆಟ್ಟಿಗೆ ಎಂದು ಕರೆಯುತ್ತಾರೆ, 1966 ರಿಂದ 1984 ರ ವರೆಗೆ 840 ವಿಮಾನಗಳು ಉತ್ಪಾದನೆಗೊಂಡರೆ ಅರ್ಧದಷ್ಟು ವಿಮಾನಗಳು ಕ್ರ್ಯಾಶ್ ಆಗಿವೆ,170 ಯೋಧ  ಪೈಲಟ್ ಗಳು ಮರಣ ಹೊಂದಿದ್ದಾರೆ, 40 ಜನ ನಾಗರಿಕರು ಮರಣ ಹೊಂದಿದ್ದಾರೆ. 1963 ರಿಂದ 2013 ವರಿಗೆ 1200 ವಿಮಾನಗಳು ಸಿದ್ಧಗೊಂಡರೆ ಬಳಕೆಯಲ್ಲಿರುವದು ಕೆವಲ 252 ವಿಮಾನಗಳು ಮಾತ್ರ, ದುಡ್ಡು ಹಾಳಾಗಲಿ ಆದ್ರೆ ಯುದ್ಧಮಾಡದೇ ತರಬೇತಿ ಹಂತದಲ್ಲಿ ಪೈಲಟ್ ಗಳು ಜೀವ ಕಳೆದುಕೊಳ್ಳಲು ಹೆಚ್ಎಎಲ್ ಏನು ಮಾಡಿದರೂ ಜನ ಒಪ್ಪಿಕೊಳ್ಳಬೇಕಾ? ಸತ್ತ ಅಮಾಯಕರ ಕುಟುಂಬಗಳಿಗೆ ಭಾವನೆಗಳಿಲ್ಲವೇ ?

ಮಿಗ್ ಬದಲಿಗೆ ತೇಜಸ್ ಯುದ್ಧವಿಮಾನ LCA 2001 ಯೋಜನೆ ಒಪ್ಪಿಗೆ ಸಿಕ್ಕು 2003 ಉತ್ಪಾದನೆ ಶುರುವಿಟ್ಟುಕೊಂಡು 2011 ರಲ್ಲಿ ಮೊದಲ ಹಾರಾಟ  2015 ರಲ್ಲಿ ಸೇವೆಗೆ ಲಭ್ಯ 2016 ರಲ್ಲಿ ವಾಯುಸೇನೆಗೆ ಹಸ್ತಾಂತರಿಸುತ್ತಾರೆ. ತೇಜಸ್ ವಿಮಾನ ವಿಳಂಬದ ಬಗ್ಗೆ ಪಾರ್ಲಿಮೆಂಟರಿ ಕನ್ಸಲ್ಟೇಟಿವ್ ಕಮಿಟಿ ಫಾರ್ ಡಿಫೆನ್ಸ್ ವರದಿ ಕೊಡುತ್ತದೆ, ಹೆಚ್ಎಎಲ್ ತೇಜಸ್ ವಿಮಾನ ವಿಳಂಬದಿಂದ ಮಿಗ್-21 ವಿಮಾನ ಅವಲಂಬಿಸಿ ಪ್ರಾಣಹಾನಿ ಧನಹಾನಿಗಳಿಗೆ ಕಾರಣವಾಗುತ್ತದೆ, ಹೆಚ್ಎಎಲ್ ಕಾರ್ಯವೈಖರಿಯಲ್ಲಿ ಸುಧಾರಣೇತರಲು 01/03/2012 ರಲ್ಲಿ ಸರಕಾರ ಯೋಜನಾ ಆಯೋಗದ ಸದಸ್ಯ ಬಿ.ಕೆ. ಚತುರ್ವೇದಿ ಹೆಚ್ಎಎಲ್ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು ಸುಧಾರಣೆ,ಸಲಹೆಗಳನ್ನು ಸಿದ್ಧಪಡಿಸುತ್ತಾರೆ.

ಇಂದು ಹೆಚ್ಎಎಲ್ ಗೆ ಮೋಸ ಆಗಿದೆ ಉದ್ಯೋಗ ಅವಕಾಶ ತಪ್ಪಿಹೋಗಿದೆಯೆಂದು ಬಾಯಿಬಡ್ಕೊಳ್ತಿರೋ ಕಾಂಗ್ರೆಸ್ ಅಧ್ಯಕ್ಷತೆಯ ಪಿಸಿಸಿಡಿ ಪಾರ್ಲಿಮೆಂಟರಿ ರಕ್ಷಣಾ ವ್ಯವಹಾರಗಳ ಸಮಿತಿ ಹೆಚ್ಎಎಲ್ ಈ ರೀತಿ ಕೆಲಸ ಮಾಡಿದರೆ ಆಗಲ್ಲವೆಂದಿದ್ದರು.  ಸಮಿತಿಯಲ್ಲಿ ಮನೀಶ್ ತಿವಾರಿ, ನವೀನ್ ಜಿಂದಾಲ್, ಶಶಿತರೂರ್, ಸುರೇಶ ಕಲ್ಮಾಡಿ, ಬ್ರಿಜ್ಭೂಷಣ್, ಶರಣ್ ಸಿಂಗ್, ಕಾಲಕೇಶ್ ಸಿಂಗ್ ದೇವ್, ಮುರಳಿ ಮನೋಹರ ಜೋಷಿ, ಬಾಳ್ ಆಪ್ಟೆ, ಎಸ್ಕೆ ದುವಾ, ಈಶ್ವರಲಾಲ್ ಜೈನ್, ಮಹೇಂದ್ರ ಪ್ರಸಾದ್ ಇವರ ವರದಿಯಾಧರಿಸಿ ರಾಫೆಲ್ ಒಪ್ಪಂದದಿಂದ ಹೆಚ್ಎಎಲ್ ಕಂಪನಿಯನ್ನು ಹೊರಗಿಡಲು ನಿರ್ದರಿಸಿದ್ದು  ಎ.ಕೆ.ಅಂಟೋನಿ! ತಮ್ಮವರಿಗೆ ಸಿಗಲಿಲ್ಲವೆಂದು ಒಪ್ಪಂದವನ್ನು ಪೆಂಡಿಂಗ್ ಇಟ್ಟು ಹೋಗುತ್ತಾರೆ.  ರಿಲಯನ್ಸ್ ಸೇರ್ಪಡೆ ಕಾಂಗ್ರೆಸ್ಸಿನ ಕಾಲದ್ದೇ ಅಣ್ಣ ಬದಲಿಗೆ ತಮ್ಮ . ರಿಲಯನ್ಸ್ ಡಿಫೆನ್ಸ್ ಕಂಪೆನಿಯಲ್ಲಿರುವ ಇಂಜಿನೀಯರ್ಸ್ HAL, NAL, ADE, ADA ,LRDE, ಬಿಟ್ಟು ಹೆಚ್ಚಿನ ಸಂಬಳಕ್ಕೆ ಯಾಕೆ ಅಲ್ಲಿಗೆ ಸೇರಿರಬಾರದು?  ಆಯ್ಕೆ ರಾಫೆಲ್ ದ್ದು ಸರ್ಕಾರದ್ದಲ್ಲ.

ದುಡ್ಡಿಗೆ ಸರಿಯಾದ ವಿಮಾನ, ಯೋಧರಿಗೆ ರಕ್ಷಣೆ, ಸುರಕ್ಷತೆ, ಸ್ಪರ್ಧಾತ್ಮಕತೆ ದೃಷ್ಟಿಯಿಂದ ಯಾವ ಸರಕಾರ ತೀರ್ಮಾನ ಕೈಗೊಂಡರೂ ಬೆಂಬಲಿಸಬೇಕು, ದೇಶದ ಸುರಕ್ಷತೆಗೆ ರಾಜಿ ಸಲ್ಲದು , ಚಿನ್ನದ ಕತ್ತಿಯೆಂದು ಕತ್ತು ಕೊಯ್ದು ಕೊಳ್ಳಲಾಗಲ್ಲ.  ||ದುಶ್ಮನ್ ದೇಶ್ ಕೋ ಉಸಿ ಭಾಷಾ ಮೇ ಜವಾಬ್ ದಿಯಾ ಜಾಯೆಗಾ|| ಜೋ ಭಾಷಾ ವೊಸಮಜೆಗಾ||

ಬರಹ- ವಾಟ್ಸಪ್ಪಿನಲ್ಲಿ ಬಂದಿದ್ದು....

                                                                                                          

Edited By

Ramesh

Reported By

Ramesh

Comments