ಬಿಗ್ ಬ್ರೇಕಿಂಗ್ : ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ಸಿಎಂ ಕುಮಾರಸ್ವಾಮಿ ಏನ್ ಹೇಳುದ್ರು ಗೊತ್ತಾ,,?

10 Oct 2018 10:44 AM |
11140 Report

ಜನರ ನೆಚ್ಚಿನ ನಾಯಕರಾದ ಸಿಎಂ ಕುಮಾರಸ್ವಾಮಿ ನಾಡಿನ ಜನತೆಗಾಗಿ ಏನನ್ನಾದರೂ ಮಾಡಲು ಸಿದ್ದ ಎಂಬುದನ್ನು ಈಗಾಗಲೇ ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ನಾನು ನೆಮ್ಮದಿಯಿಂದ ಸಂತೋಷದಿಂದ ರಾಜ್ಯ ನಡೆಸುತ್ತಿಲ್ಲ. ನಾನು ಮೂಲ ರಾಜಕಾರಣಿಯಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿರುವೆ. ನಾನು ರಾಜ್ಯದ ಜನರ ಕೆಲಸ ಮಾಡಲು ಬಂದಿರುವೆ.

ನಾಡನ್ನು ಕಟ್ಟಲು ರಾಜ್ಯದ ಜನತೆಯ ಸಹಕಾರ ಬೇಕಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು  ರಾಜ್ಯದ ರೈತರು ಸೇರಿದಂತೆ ಸಾಲ ಮಾಡಿರುವ ಯಾವ ರೈತರು  ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಇದು ನಿಮ್ಮ ಸರ್ಕಾರ. ಪ್ರತಿಯೊಂದು ಕುಟುಂಬವನ್ನು ಉಳಿಸುವ ಜವಾಬ್ದಾರಿ ನಮ್ಮದು ಪ್ರತಿಯೊಂದು ಕುಟುಂಬ ನೆಮ್ಮದಿಯಾಗಿ ಬದುಕಲು ಹಲವು ಯೋಜನೆ ತರಲಿದ್ದೇನೆ ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ. ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಮಾತನ್ನು ಹೇಳುತ್ತಿದ್ದನೆ ಎಂದರು. ದಯವಿಟ್ಟು ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು.

Edited By

hdk fans

Reported By

hdk fans

Comments