ಜೆಡಿಎಸ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ ಮುಖ್ಯಮಂತ್ರಿ ಕುಮಾರಣ್ಣ..! ಯಾವ ವಿಷಯಕ್ಕೆ ಗೊತ್ತಾ..?

03 Oct 2018 4:32 PM |
4054 Report

ರಾಜಕೀಯದಲ್ಲಿ ಸಾಕಷ್ಟು ಗಲಾಟೆಗಳು ಗೊಂದಲಗಳು ನಡೆಯುತ್ತಲೆ ಇರುತ್ತವೆ. ಅದೇನು ಹೊಸದೇನಲ್ಲ..ಇತ್ತಿಚಿಗೆ ಅದು ಕಾಮನ್ ಆಗಿಬಿಟ್ಟಿದೆ. ಆದರೆ ಇದರ ಬೆನ್ನಲೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಕಾರ್ಯಕರ್ತರಿಗೆ ಕಿವಿಮಾತನ್ನು ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರಿಗೆ ಸಿಎಂ ಕುಮಾರಸ್ವಾಮಿ ಕಿವಿಮಾತನ್ನು ಹೇಳಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ನಡೆದುಕೊಳ್ಳಬೇಡಿ.. ಯಾವುದೆ ಕಾರಣಕ್ಕೂ ಗಲಾಟೆಗೆ ಆಸ್ಪದವನ್ನು ಕೊಡಬೇಡಿ. ಇತರೆ ನಾಯಕರುಗಳ ಬಗ್ಗೆ ಮಾತನಾಡಬೇಡಿ, ಏನೆ ವಿಷಯ ಇದ್ದರೂ ಕೂಡ ನನ್ನ ಬಳಿಯೇ ಚರ್ಚೆ ಮಾಡಿ..  ಏನೇ ತಪ್ಪಾಗಿದ್ದರೂ ಕೂಡ ನಾನು ಅದನ್ನು ತಿದ್ದಿಕೊಳ್ಳುತ್ತೇನೆ. ದೇವೆಗೌಡರ ಪಕ್ಷ ನಿಮ್ಮಿಂದ ಉಳಿಸಿ ನಾವು ಬೆಳಸಬೇಕು ಎಂದರು. ಅಷ್ಟೆ ಅಲ್ಲದೆ ನಾನು ಚುನಾವಣೆಯಲ್ಲಿ ಒಂದು ದಿನ ಪ್ರಚಾರಕ್ಕೆ ಬರದೆ ಇದ್ದರೂ ಕೂಡ ನನ್ನನ್ನು ಗೆಲ್ಲಿಸಿದ್ದೀರಾ. ನಿಮ್ಮ ನೋವನ್ನು ಕೇಳುವುದಕ್ಕೆ ಸಭೆ ಆಯೋಜಿಸಿದ್ದೇವೆ. ನಿಮ್ಮ ನೋವು ಏನೆ ಇದ್ದರೂ ನನಗೆ ತಿಳಿಸಿ ಎಂದಿದ್ದಾರೆ. 

Edited By

hdk fans

Reported By

hdk fans

Comments