ಕುಟುಂಬ ಮಿಲನ ಕಾರ್ಯಕ್ರಮ ಭಾರತೀಯ ಜನತಾ ಪಾರ್ಟಿ ವತಿಯಿಂದ

29 Sep 2018 5:40 PM |
580 Report

ನಮ್ಮ ಮನೆ, ನಮ್ಮ ಊರು, ನಮ್ಮ ಸಮಾಜ, ನಮ್ಮ ದೇಶ ಒಂದು ಕುಟುಂಬ ಅನ್ನುವ ತತ್ವದ ಅಡಿಯಲ್ಲಿ ಭಾರತೀಯ ಜನತಾ ಪಕ್ಷದವತಿಯಿಂದ ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಸವಿನೆನಪಿಗಾಗಿ ದಿನಾಂಕ 29-9-2018 ಶನಿವಾರ ಎನ್.ಎಸ್.ಕನ್ವೆನ್ ಷನ್ ಹಾಲ್ ನಲ್ಲಿ ಬೆಳಿಗ್ಗೆ 9-30 ರಿಂದ ಸಂಜೆ 4-30 ರವರೆಗೆ ಕುಟುಂಬ ಮಿಲನ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ದೊಡ್ಡಬಳ್ಳಾಪುರ ವತಿಯಿಂದ ಆಯೋಜಿಸಲಾಗಿತ್ತು, ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಪರಮಪೂಜ್ಯ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ದೊಡ್ಡಬಳ್ಳಾಪುರ ತಾಲ್ಲೂಕು ಬಾಜಪ ಅಧ್ಯಕ್ಷ ಸಿ.ನಾರಾಯಣಸ್ವಾಮಿ ದಂಪತಿಗಳು ಮತ್ತು ಗುಡಿಬಂಡೆ ಮಂಡಲಾಧ್ಯಕ್ಷ ಬಾಬು ದಂಪತಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಾ.ಜ.ಪ. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರ್ಯಕ್ರಮದ ಬೌದ್ಧಿಕ್ ನಡೆಸಿಕೊಟ್ಟರು.  ಒಂದೇ ಭಾರತ ಶ್ರೇಷ್ಠ ಭಾರತ ಅನ್ನುವ ತತ್ವದ ಅಡಿಯಲ್ಲಿ ಕುಟುಂಬ, ಸಾಮರಸ್ಯ, ಸಹಬಾಳ್ವೆ ಕುರಿತು ಬಂದಿದ್ದ ಕುಟುಂಬಗಳಿಗೆ ಕಿವಿಮಾತು ಹೇಳಿದರು.  ಚಿಕ್ಕಬಳ್ಳಾಪುರ ಮಂಡಲ ಅಧ್ಯಕ್ಷ ಚಂದ್ರಣ್ಣ ದಂಪತಿಗಳು ಮತ್ತು ಗುಡಿಬಂಡೆ ಮಂಡಲ ಅಧ್ಯಕ್ಷ ರಾಜಗೋಪಾಲ್ ದಂಪತಿಯರು ಅಥಿತಿಗಳಾಗಿ ಆಗಮಿಸಿದ್ದರು. ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು, ದೇಸಿ ಕ್ರೀಡೆ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಆಯೋಜಕರು ಮಕ್ಕಳು ಮತ್ತು ದಂಪತಿಗಳಿಗೆ ಏರ್ಪಡಿಸಿದ್ದರು.  ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಮಹಿಳೆಯರಿಗೆ ಭಾಗಿನ ನೀಡಿ ಗೌರವಿಸಲಾಯಿತು.

ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚ ಪದಾಧಿಕಾರಿಗಳು ಭಾಗವಹಿಸಿದ್ದರು.

Edited By

Ramesh

Reported By

Ramesh

Comments