ಬಿ.ಎಸ್.ವೈ ಮೇಲೆ ಸಿಎಂ ಎಚ್’ಡಿಕೆ ‘ಶಿವರಾಮ’ ಅಸ್ತ್ರ ಪ್ರಯೋಗ..! ಏನಿದು ಶಿವರಾಮ ಅಸ್ತ್ರ ಪ್ರಯೋಗ..!?

27 Sep 2018 5:28 PM |
9026 Report

ಮುಖ್ಯಮಂತ್ರಿ ಕುಮಾರಸ್ವಾಮಿಯವರು  ಬೆಂಗಳೂರಿನಲ್ಲಿ ಮಾತನಾಡುವಾಗ ಯಡಿಯೂರಪ್ಪ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಿರಂಗವಾಗಿಯೇ ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ನಮ್ಮ ಬಳಿ ಶಿವರಾಮ ಕಾರಂತ ಬಡಾವಣೆ ಅಸ್ತ್ರ ಇದೆ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ರೈತರ ಸಾಲಮನ್ನಾದ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆ ಯಡಿಯೂರಪ್ಪ ಅವರಿಗಿಲ್ಲ. ಅವರಿಂದ ಉಪದೇಶ ಪಡೆದು ಆಡಳಿತ ನಡೆಸುವ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿಯಾಗುವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಬಿಜೆಪಿ ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೇರೆಯವರ ಮೇಲೆ ಕಲ್ಲು ಎಸೆಯುವ ಕೆಲಸವನ್ನು ಮಾಡುತ್ತಿದೆ. ನಾವು ಬೀದಿಯಲ್ಲಿದ್ದೇವೆ ನೀವು ಗಾಜಿನ ಮನೆಯಲ್ಲಿದ್ದೀರಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಅಪ್ಪ-ಮಕ್ಕಳು ಎಂದು ಲಘುವಾಗಿ ಮಾತನಾಡಿ ಟೀಕಿಸುವುದನ್ನು ಮೊದಲು ನಿಲ್ಲಿಸಲಿ ಎಂದರು. 2010ರ ಶಿವರಾಮ ಕಾರಂತ ಬಡಾವಣೆ ಢಿನೋಟಿಫಿಕೇಶನ್ ಪ್ರಕರಣದ ಸತ್ಯ ಜನರಿಗೆ ಗೊತ್ತಿಲ್ಲವೆ ಎಂದು ಪ್ರಶ್ನೆ ಮಾಡಿರುವ ಮುಖ್ಯಮಂತ್ರಿ,  ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಿಎಸ್‌ ವೈ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆಯೇ? ಎಂಬುದು ಸದ್ಯಕ್ಕೆ ನಮ್ಮ ಮುಂದೆ ಇರುವ ಪ್ರಶ್ನೆಯಾಗಿದೆ.

Edited By

Shruthi G

Reported By

hdk fans

Comments