ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕೊಡ್ತು ಗ್ರೀನ್ ಸಿಗ್ನಲ್..! ಯಾರಿಗೆ ಯಾವ ಸ್ಥಾನ?ಇಲ್ಲಿದೆ ನೋಡಿ ಫೈನಲ್ ಪಟ್ಟಿ..!

26 Sep 2018 1:00 PM |
9008 Report

ಆ.4 ರೊಳಗೆ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯನ್ನು ಮಾಡುವುದಕ್ಕೆ ಸೆ.30 ರೊಳಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ನೀಡುತ್ತದೆ ಎನ್ನಲಾಗಿದೆ. ಈ ನಡುವೆ ದೋಸ್ತಿ ಸರ್ಕಾರ ರಚನೆ ಬಳಿಕ ಸಂಪುಟ ರಚನೆ ವೇಳೆ ಅನೇಕ ಹಿರಿಯರು ಹಾಗೂ 2-3 ಬಾರಿ ಶಾಸಕರಾದವರಿಗೆ ಅವಕಾಶ ನೀಡಿರಲಿಲ್ಲ ಆ ವೇಳೆಯಲ್ಲಿ ಆನೇಕ ಮಂದಿ ಸಿಟ್ಟಾಗಿ ಬಹಿರಂಗವಾಗಿ ಪಕ್ಷದ ವಿರುದ್ದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಈಗಾಗಲೇ ಸಂಪುಟದಲ್ಲಿ ಕಾಂಗ್ರೆಸ್​ನಿಂದ 16 ಮಂದಿ ಇದ್ದು, ಆರು ಸ್ಥಾನ ತುಂಬಿಕೊಳ್ಳಲು ಅವಕಾಶವಿದೆ. ಈ ಆರು ಸ್ಥಾನಕ್ಕೆ ಭಾರೀ ಪೈಪೋಟಿ ಇದ್ದು, ಹಿರಿಯ ಶಾಸಕರು ಕಿರಿಯರೊಂದಿಗೆ ಪೈಪೋಟಿಗೆ ಇಳಿಯುವುದು ಅನಿವಾರ್ಯವಾಗಿದೆ. ರಾಮಲಿಂಗಾರೆಡ್ಡಿಗೆ ಗೃಹ ಖಾತೆ ಸಾಧ್ಯತೆ ನೀಡಲಿದೆ ಎನ್ನಲಾಗುತ್ತಿದ್ದು, ಡಿಸಿಎಂ ಪರಮೇಶ್ವರ್ ಅವರು ಬೆಂಗಳೂರು ನಗರ ಸಚಿವ ಖಾತೆಯನ್ನು ಬಿಟ್ಟುಕೊಡುವುದಕ್ಕೆ ಮುಂದಾಗುತ್ತಿಲ್ಲ, ಈ ಹಿನ್ನಲೆಯಲ್ಲಿ ಅವರ ಗೃಹ ಖಾತೆಯನ್ನು ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಶಾಮನೂರು ಶಿವಶಂಕರಪ್ಪ, ರೋಷನ್ ಬೇಗ್, ಎಚ್.ಕೆ.ಪಾಟೀಲ್, ಎಂ.ಕೃಷ್ಣಪ್ಪ, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ತನ್ವೀರ್ ಸೇಠ್, ಎಚ್.ಎಂ.ರೇವಣ್ಣ ಬಿ.ಸಿ.ಪಾಟೀಲ್, ಸಿ.ಎಸ್.ಶಿವಳ್ಳಿ, ತುಕಾರಾಂ, ಪ್ರತಾಪ್ ಗೌಡ ಪಾಟೀಲ್, ಬಿ.ಕೆ.ಸಂಗಮೇಶ್, ರೂಪಾ ಶಶಿಧರ್, ಲಕ್ಷ್ಮೀ ಹೆಬ್ಬಾಳ್ಕರ್, ಸುಧಾಕರ್, ವಿ.ಎಸ್.ಉಗ್ರಪ್ಪ ಕೂಡ ಸಚಿವ ಸ್ಥಾನವನ್ನು ಬಯಸುತ್ತಿದ್ದಾರೆ. ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಶಿವಳ್ಳಿ, ತುಕಾರಾಂ ಹೆಸರು ಸಚಿವ ಸ್ಥಾನಕ್ಕೆ ಅಂತಿಮಗೊಂಡಿದೆ. ಎಂ.ಟಿ.ಬಿ.ನಾಗರಾಜ್, ಬಿ.ಸಿ.ಪಾಟೀಲ್, ಸಂಗಮೇಶ್​ಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

 

Edited By

Shruthi G

Reported By

hdk fans

Comments