ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ ಈ ಭಾಗ್ಯ..!!

25 Sep 2018 2:15 PM |
5474 Report

ಸರ್ಕಾರಿ ಶಾಲಾ ಮಕ್ಕಳು ಇಷ್ಟು ದಿನ ಬಿಸಿಯೂಟ ಮತ್ತು ಹಾಲು ಸೇವಿಸುತ್ತಿದ್ದರು, ಆದರೆ ಇನ್ನುಮುಂದೆ ಹಾಲಿನ ಜತೆಗೆ ಜೇನುತುಪ್ಪವನ್ನು ಕೂಡ ಸವಿಯಲಿದ್ದಾರೆ. ಹೌದು.. ರಾಜ್ಯ ಸರ್ಕಾರ ಹೊಸ ಯೋಜನೆಗೆ ಕೈಹಾಕಿದೆ. ಕೇಂದ್ರ ಮನವ ಸಂಪನ್ಮೂಲ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಈ ಸೂಚನೆಯನ್ನು ನೀಡಿದೆ. ಮಧ್ಯಾಹ್ನದ ಬಿಸಿಯೂಟ, ಹಾಲಿನ ಜತೆ ಇದೀಗ ಜೇನುತುಪ್ಪವೂ ಸಿಗಲಿದೆ.

ಉತ್ತಮ ಪೌಷ್ಠಿಕಾಂಶವುಳ್ಳ ಆಹಾರವನ್ನು ಮಕ್ಕಳಿಗೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಾಗಲೇ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ. ಜೇನಿನಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವ ಶಕ್ತಿ ಇದೆ. ಜೇನು ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಆಂಟಿ ಬಯೋಟಿಕ್ ಗುಣಗಳನ್ನು ಹೊಂದಿದೆ. ಕೆಮ್ಮು, ಗಂಟಲು ಕೆರೆತ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣ ಜೇನುತುಪ್ಪಕ್ಕಿದೆ.ಕೊಬ್ಬಿನಂತಹ ಅಂಶಗಳು ಕರಗಲಿವೆ.

Edited By

Shruthi G

Reported By

hdk fans

Comments