ಮೈತ್ರಿ ಸರಕಾರ ಉಳಿಸಲು ಜಮೀರ್ ಅಹಮದ್ ಬಳಸಿದ ಈ ರಾಮಬಾಣ..! ಬಿಜೆಪಿ ಗೆ ಉಲ್ಟಾ ಹೊಡೆದ ಶಾಸಕರು ..!!

24 Sep 2018 12:58 PM |
13122 Report

ಜಮೀರ್ ಅಹಮದ್ ಖಾನ್ ಕರ್ನಾಟಕ ಕಾಂಗ್ರೆಸ್‌ನ ಹೊಸ ಟಬ್ರಲ್ ಶೂಟರ್ ಎಂದು ಹೇಳಬಹುದು. ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರ ಪೈಕಿ ಜಮೀರ್ ಅಹಮದ್ ಖಾನ್ ಸಹ ಒಬ್ಬರು.

ಅಸಮಾಧಾನಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಹೊಣೆಯನ್ನು ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್‌ಗೆ ನೀಡಿದ್ದಾರೆ. ಆದ್ದರಿಂದ, ಶಾಸಕರ ಜೊತೆ ಮೊದಲು ಮಾತುಕತೆ ನಡೆಸಿ, ಬಳಿಕ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಜಮೀರ್ ಅಹಮದ್ ಖಾನ್ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆಗೂ ಗುರುತಿಸಿಕೊಂಡಿದ್ದಾರೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ವೇಣುಗೋಪಾಲ್ ಜೊತೆಗೆ ಅವರು ಕಾಣಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿರುವ ಆನಂದ್ ಸಿಂಗ್, ಎಂ.ಟಿ.ಬಿ.ನಾಗರಾಜ್, ಡಾ.ಕೆ.ಸುಧಾಕರ್ ಅವರ ಜೊತೆ ಜಮೀರ್ ಮಾತುಕತೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರ ನಿವಾಸದಲ್ಲಿ ಭಾನುವಾರ ಜಮೀರ್ ಅಹಮದ್ ಖಾನ್ ಉಪಹಾರ ಸವಿದರು. ಬಳಿಕ ಮಾತನಾಡಿದ ಅವರು, 'ಉಪಹಾರಕ್ಕೆ ಕರೆದಿದ್ದರು ಬಂದಿದ್ದೆ. ಊಟಕ್ಕೆ ಕರೆದರೆ ಅದಕ್ಕೂ ಬರುತ್ತಿದ್ದೆ. ಇಬ್ಬರದ್ದು ಕಾಂಗ್ರೆಸ್ ಪಕ್ಷ ಅದು ಬಿಟ್ಟರೆ ಬೇರೆ ಯಾವುದೇ ವಿಶೇಷವಿಲ್ಲ' ಎಂದು ಹೇಳಿದರು. ಡಾ.ಕೆ.ಸುಧಾಕರ್ ಅವರು ಚೆನ್ನೈಗೆ ದೇವಾಲಯಕ್ಕೆ ಹೋಗಿದ್ದರು. ಬೆಂಗಳೂರಿಗೆ ಬಂದ ಬಳಿಕ ಅವರು ನನಗೆ ಫೋನ್ ಮಾಡಿದ್ದರು. ಮಾಧ್ಯಮದಲ್ಲಿ ಏನೇನೋ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು. ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಈ ಕುರಿತು ಟ್ವಿಟ್ ಸಹ ಮಾಡಿದ್ದಾರೆ' ಎಂದು ಜಮೀರ್ ಹೇಳಿದರು. ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಟಿ.ಬಿ.ನಾಗರಾಜ್ ಸಚಿವ ಸಂಪುಟ ವಿಸ್ತರಣೆಗಾಗಿ ಪಟ್ಟು ಹಿಡಿದಿದ್ದಾರೆ. ಬಹಿರಂಗವಾಗಿ ನನಗೆ ಸಚಿವ ಸ್ಥಾನಬೇಕು ಎಂದು ಹೇಳಿದ್ದಾರೆ. ಜಮೀರ್ ಅಹಮದ್ ಅವರು ಬೆಂಗಳೂರಿನಲ್ಲಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಭಾನುವಾರ ಹೊಸಕೋಟೆಯಲ್ಲಿರುವ ಎಂ.ಟಿ.ಬಿ.ನಾಗರಾಜ್ ನಿವಾಸಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಖಾನ್ ಭೇಟಿ ನೀಡಿದ್ದರು. ಬಳಿಕ ಬೆಂಗಳೂರಿನಲ್ಲಿ ಅವರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದರು.

Edited By

Shruthi G

Reported By

hdk fans

Comments