ವಾಜಪೇಯಿ ಆದರ್ಶ ಜನಪರ ಆಡಳಿತ ಮಾದರಿ, ಅಜಾತ ಶತ್ರುವಿಗೆ ಕಾವ್ಯ ನಮನ

22 Sep 2018 8:41 AM |
365 Report

ದೊಡ್ಡಬಳ್ಳಾಪುರ ತಾಲ್ಲೂಕಿನ ನಮೋ ಸೇನೆ ಹಾಗೂ ಶ್ರೀ ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಸಮಿತಿ ವತಿಯಿಂದ ಭಾರತ ದೇಶದ ರಾಜಕೀಯ ಧೃವತಾರೆ, ಕವಿ ಅಟಲ್ ಬಿಹಾರಿ ವಾಜಪೇಯಿ ಯವರ ವ್ಯಕ್ತಿತ್ವಕ್ಕೆ ಕಾವ್ಯರೂಪದ ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ 21-9-2018 ರ ಶುಕ್ರವಾರ ಬೆಳಿಗ್ಗೆ 11 ಘಂಟೆಗೆ ನಗರದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ವಾಜಪೇಯಿಯವರಿಗೆ ಪುಷ್ಪನಮನ ಸಲ್ಲಿಸಿ, ಮಹಿಳಾ ಮೋರ್ಚ ಪದಾಧಿಕಾರಿಗಳಾದ ಕಮಲಾ, ದಾಕ್ಷಾಯಿಣಿ, ಉಮಾಮಹೇಶ್ವರಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ನಗರದ ಬಿಜೆಪಿ ಪಕ್ಷದ ಹಿರಿಯ ರಾಜಕಾರಣಿ ನಾರಾಯಣ ಶರ್ಮ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ದೊಡ್ಡಬಳ್ಳಾಪುರಕ್ಕೆ ಬಂದ ವಾಜಪೇಯಿ, ನೇಕಾರರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದರು ಎಂದು ತಿಳಿಸಿದರು. ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲಾ ಸ್ವಾಗತಿಸಿ ಅಟಲ್ ಜಿ ಯವರು ಬರೆದ ಕವನ ವಾಚಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಶಿಕ್ಷಕ ಸಾಹಿತಿ ಮಹಾಲಿಂಗಯ್ಯ ಮಾತನಾಡುತ್ತಾ ಸಿದ್ದಗಂಗಾ ಶ್ರೀಗಳು ಹಗೂ ವಾಜಪೇಯಿ ರವರಂತಹ ಕಾಲಘಟ್ಟದಲ್ಲಿ ಜೀವಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಬಣ್ಣಿಸಿದರು. ವೈಧ್ಯಕಿಯ ಪ್ರಕೋಷ್ಠದ ಡಾ. ಪದ್ಮ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕವಿಗಳೊಂದಿಗೆ ಹಲವಾರು ಯುವ ಕವಿಗಳೂ ಭಾಗವಹಿಸಿದ್ದರು, ಆರಂಭದಲ್ಲಿ ಪರ್ತಕರ್ತ, ಪ್ರಾಂಶುಪಾಲ ಕೆ.ಆರ್.ರವಿಕಿರಣ್ ಅಟಲ್ ಜಿ ಕುರಿತು ಕನಸು ಲೋಕಾಭಿರಾಮ ಎಂಬ ಕವನವನ್ನು ವಾಚಿಸಿದರು, ಹಿರಿಯ ಪತ್ರಕರ್ತ, ಸಾಹಿತಿ, ಹಾಯ್ ದೊಡ್ಡಬಳ್ಳಾಪುರ ಸಂಪಾದಕ ರಾಜಶೇಕರ ಶೆಟ್ಟಿ ಕವಿಗೊಂದು ಅಕ್ಷರಾಂಜಲಿ ಸಲ್ಲಿಸಿದರೆ, ನಮೋ ಸೇನೆಯ ಕೆಂಪೇಗೌಡ ಗುರುವಿಗೆ ನಮನ ಎಂಬ ಕಾವ್ಯ ವಾಚಿಸಿದರು, ಹರೀಶ್, ಗಂಗಮುತ್ತಯ್ಯ, ನಿಖಿಲ್ ಚೌದುರಿ, ಹರಿಪ್ರಸಾದ್, ಭಾಸ್ಕರ್, ಮುದ್ದಗಂಗಸ್ವಾಮಿ ಚಿಕ್ಕಣ್ಣಯ್ಯ ಮತ್ತಿತರರು ಕಾವ್ಯ ವಾಚಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷೆ ಗಿರಿಜ, ಲೀಲಾ ಮಹೇಶ, ಅಮರನಾಥ್, ಶ್ರೀನಿವಾಸ್, ರಂಗರಾಜು, ರಾಮಕೃಷ್ಣ, ಶಿವಶಂಕರ್, ತುಮಕೂರು ಆನಂದ, ಶಿವು ಹಿಂದ್ರಿಯ, ನಮೋ ಸೇನೆಯ ಬಸವರಾಜ್, ಜನಪರ ಮಂಜು, ಅವಿನಾಶರೆಡ್ಡಿ, ಹಾಜರಿದ್ದರು.

Edited By

Ramesh

Reported By

Ramesh

Comments