ಮಳೆಗಾಗಿ ಮಾತೆ ಅನ್ನಪೂರ್ಣೇಶ್ವರಿ ದೇವಿಗೆ ರೈತರ ವಿಶೇಷ ಪೂಜೆ

21 Sep 2018 6:09 PM |
1318 Report

ಕೊರಟಗೆರೆ ಸೆ.21 :- ರಾಜ್ಯದಲ್ಲಿ ಒಂದೆಡೆ ಅತೀವೃಷ್ಟಿ ಮತ್ತೊಂದೆಡೆ ಅನಾವೃಷ್ಟಿಯಿಂದ  ರೈತರು ಕಂಗಾಲಾಗಿದ್ದಾರೆ   ಎಂದು ಮಾತೆ ಅನ್ನಪೂರ್ಣೇಶ್ವರಿ ದೇವಾಲಯದ ಅಧ್ಯಕ್ಷ ಕೆ.ಎನ್ ದೇವರಾಜ್ ತಿಳಿಸಿದರು.

 

      ಪಟ್ಟಣದ ಹೊರವಲಯದಲ್ಲಿನ ಬೋಡಬಂಡೇನಹಳ್ಳಿ ರಸ್ತೆಯಲ್ಲಿರುವ ಮಾತೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಶುಕ್ರವಾರ ಮಳೆಗಾಗಿ ರೈತರು ಹಮ್ಮಿಕೊಂಡಿದ್ದ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 

ಕಳೆದ 15 ವರ್ಷಗಳಿಂದ ಪ್ರತೀ ವರ್ಷ    ಪಟ್ಟಣದ ರೈತರು ಮಾತೆ ಅನ್ನಪೂರರ್ಣೇಶ್ವರಿ  ಪೂಜೆಯನ್ನು ಮಾಡುತ್ತಿದ್ದು ಪೂಜೆಯ ನಂತರ ಪ್ರತೀ ವರ್ಷವೂ ಮಳೆಯಾಗಿ ಉತ್ತಮ ಪಸಲು ಕೈಸೇರುತ್ತಿದ್ದ ೀ ಬಾರಿಯೂ ರೈತರು ದೇವಿಗೆ ವಿಶೇಷ ಅಲಂಕಾರದೊಂದಿಗೆ ಹಲವು ಧಾರ್ಮಿಕ ಕೈಂಕರ್ಯಗಳನ್ನು ಮಾಡಿರುವುದಾಗಿ ಹೇಳಿದರು.

 ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಚಂದ್ರಶೇಖರಪ್ಪ, ಪುಟ್ಟರಾಜು, ಮೈಲಾರಪ್ಪ, ರಂಗಣ್ಣ, ಗೋವಿಂದರಾಜು, ಸಂಜೀವಪ್ಪ, ಇಲಿಯಾಜ್ ಪಾಷಾ, ಮಲ್ಲಿಗಯ್ಯ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments