ಬಿಜೆಪಿಯ ಅಪರೇಷನ್​ 'ಕಮಲ' ವನ್ನ ಭೇದಿಸಲು ದೊಡ್ಡಗೌಡ್ರು ಎಂಟ್ರಿ..!

21 Sep 2018 3:49 PM |
360 Report

ಸಮ್ಮಿಶ್ರ ಸರ್ಕಾರದ ನಾಯಕರ ನಡುವಿನ ವೈಮನಸ್ಸಿನ ಲಾಭಾ ಪಡೆಯಲು ಮುಂದಾಗಿರುವ ಬಿಜೆಪಿಗೆ ತೀರುಗೇಟು ನೀಡಲು ಸ್ವತಃ ಈಗ ಜೆಡಿಎಸ್​ ವರಿಷ್ಠ ದೇವೇಗೌಡರು ರಾಜ್ಯ ರಾಜಕೀಯಕ್ಕೆ ಮಧ್ಯ ಪ್ರವೇಶಿಸಲು ಮುಂದಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ವಿರುದ್ಧ ಅತೃಪ್ತಿ ಹೊಂದಿರುವ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಅಪರೇಷನ್​ ಕಮಲಕ್ಕೆ ಮುಂದಾಗಿದೆ. ಇದರಿಂದಾಗಿ ಎಚ್ಚೆತ್ತ ಕಾಂಗ್ರೆಸ್​-ಜೆಡಿಎಸ್​ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.  ಇದಕ್ಕಾಗಿ ಯಾವ ಹಂತಕ್ಕಾದರೂ ಹೋಗಿ ಸರ್ಕಾರ ಉಳಿಸಿಕೊಳ್ಳಬೇಕಿಂದು ಪಣಕೂಡ ತೊಟ್ಟಿದ್ದಾರೆ. ಇದಕ್ಕಾಗಿ ಅಪರೇಷನ್​ ಕಮಲದ ಇಂಚಿಂಚು ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಶಾಸಕರ ಕತೆ ಮಾಹಿತಿ ಸಂಗ್ರಹಕ್ಕೂ ಸೂಚನೆ ನೀಡಿದ್ದಾರೆ. ಜಾರಕಿಹೊಳಿ ಅತೃಪ್ತಿ ಬೆನ್ನಲ್ಲೇ ಕಾಂಗ್ರೆಸ್​ ತೊರೆಯಲು ಸಿದ್ದವಾಗಿದ್ದ 16 ಕಾಂಗ್ರೆಸ್​ ಶಾಸಕರು ಸೇರಿದಂತೆ ಜೆಡಿಎಸ್​ನ ಅತೃಪ್ತ ಶಾಸಕರ ಜೊತೆ ಬಿಜೆಪಿ ಅಪರೇಷನ್​ ಕಮಲದ ಕುರಿತು ಮಾತುಕತೆ ನಡೆಸಿದ್ದರೇ, ಈ ಬಗ್ಗೆ ಶಾಸಕರ ಕರೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದರು. ಇನ್ನು ದೇವೇಗೌಡರ ಸಲಹೆಯಂತೆ ಕಾಂಗ್ರೆಸ್​ ಪಡೆ ಅಪರೇಷನ್​ ಕಮಲ ಮಾಹಿತಿ ಪಡೆಯಲು ಕೆಪಿಸಿಸಿ  ಅಧ್ಯಕ್ಷ ದಿನೇಶ್ ಗುಂಡೂರಾವ್​ರಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದರು.

keyworld:hd devegowda, 

Edited By

hdk fans

Reported By

hdk fans

Comments