ಸಿದ್ದು ಗಪ್ ಚುಪ್! ಸಿದ್ದು ಹಾರಾಟಕ್ಕೆ ಕೊನೆಗೂ ಬಿತ್ತು ಬಿಗ್ ಬ್ರೇಕ್..!

21 Sep 2018 2:14 PM |
2227 Report

ಕರ್ನಾಟಕದ ವಿಧಾನಸಭಾ ಚುನಾವಣೆ ನಿರ್ಮಿಸಿದ ಅತಂತ್ರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದರೂ ಅದು ಮುಂದುವರಿಯಬೇಕು ಎಂಬ ಭಾವನೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಂಡ್ ಗ್ಯಾಂಗಿಗೆ ಇಷ್ಟವಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಹಾರಾಟಕ್ಕೆಇದೀಗ ಬಿಗ್ ಬ್ರೇಕ್ ಹಾಕಲಾಗಿದೆ. ಹಾಗಾದ್ರೆ ಸಿದ್ದರಾಮಯ್ಯ ಗೆ ಬ್ರೇಕ್ ಹಾಗಿದು ಯಾರು? ಸಿದ್ದುಗೆ ಹೈಕಮಾಂಡ್ ಕೊಟ್ಟ ಎಚ್ಚರಿಕೆ ಏನು? ಈ ಎಲ್ಲ ಪ್ರಶೆಗಳಿಗೆ ಇಲ್ಲಿದೆ ನೋಡಿ ಕಂಪ್ಲೀಟ್ ಉತ್ತರ.. ಕಾಂಗ್ರೆಸ್ ಮೇಲಿನ ಸಿದ್ದು ಹಿಡಿತ ಸಡಿಲವಾಗಿದ್ಯ ಎಂಬ ಪ್ರಶ್ನೆ ಈ ಬೆಳವಣಿಗೆ ಯಿಂದ ಮೂಡಿದೆ. ಮಾಜಿ ಸಿ ಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಈ ಟಾಸ್ಕ್ ಕೊಟ್ಟು ಬೀಗ ಹಾಕಿದ್ದಾರೆ ಎನ್ನಲಾಗಿದೆ.. ಇಷ್ಟಕ್ಕೂ ಸಿದ್ದುಗೆ ರಾಹುಲ್ ಗಾಂಧಿ ಕೊಟ್ಟ ಟಾಸ್ಕ್ ಏನು ಅಂತೀರಾ?

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳೋ ಕೆಲಸ ಮಾಡಬೇಕು ಅದು ನಿಮ್ಮ ಕರ್ತವ್ಯ ಎಂಬ ಈ ಜವಾಬ್ದಾರಿ ಕೊಡುವ ಮೂಲಕ ಸಿದ್ದರಾಮಯ್ಯ ರವನ್ನು ಗಪ್ ಚೂಪಾಗಿರಿಸಲಾಗಿದೆ. ಲೋಕಸಭಾ ಚುನಾವಣೆಯವರೆಗೂ ಮೈತ್ರಿ ಸರ್ಕಾರ ಇರಲೇಬೇಕು.  ಹೆಚ್ಚು ಕಡಿಮೆಯಾದರೆ ಕಾಂಗ್ರೆಸ್ ಗೆ ರಾಷ್ಟ್ರಮಟ್ಟದಲ್ಲಿ ಕಪ್ಪು ಚುಕ್ಕೆಯಾಗಲಿದೆ. ಹೀಗಾಗಿ ಇದರ ಸಂಪೂರ್ಣ ಜವಾಬ್ದಾರಿ ನೀವೇ ತೆಗೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯ ನವರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

Edited By

Shruthi G

Reported By

hdk fans

Comments